ಅಪ್ಪ-ಅಮ್ಮನನ್ನು ನೋಡಲು ಬೇಗ ಹೋಗಿದ್ದಾನೆ: ರಾಘವೇಂದ್ರ ರಾಜ್ ಕುಮಾರ್

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅಗಲಿಕೆಗೆ ರಾಘವೇಂದ್ರ ರಾಜ್‍ಕುಮಾರ್ ಕಣ್ಣೀರು ಹಾಕಿದ್ದಾರೆ.

ನನ್ನನ್ನು ಎರಡು ಬಾರಿ ಆಸ್ಪತ್ರೆಗೆ ದಾಖಲಿಸಿ ಉಳಿಸಿದ್ದಾನೆ. ಆದರೆ ನನ್ನ ಕೈಯಲ್ಲಿ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ. ನನ್ನನ್ನು ಉಳಿಸಿ ಮನೆಯಲ್ಲಿ ನೀನು ಇರು ನಾನು ಈಗ ಅಪ್ಪ- ಅಮ್ಮನನ್ನು ನೋಡಲು ಬೇಗ ಹೋಗುತ್ತಿದ್ದೇನೆ ಎಂದು ಹೋಗಿದ್ದಾನೆ. ಕಲಾವಿದರಿಗೂ ಎಂದಿಗೂ ಸಾವಿಲ್ಲ. ಅವನು ಕೇವಲ ಗಂಭೀರವಾಗಿ ಮಲಗಿಕೊಂಡಿದ್ದಾನೆ ಅಷ್ಟೇ ಎಂದು ಹೇಳಿದ್ದಾರೆ.

ನನ್ನ ಮೇಲೆ ನಿಮಗೆ ನಿಜವಾದ ಪ್ರೀತಿ ಇದ್ದರೆ, ಈ ಸಮಯದಲ್ಲಿ ನೀವು ನಮಗೆ ಬೆಂಬಲ ನೀಡಬೇಕು. ಯಾವುದೇ ತೊಂದರೆ ಮಾಡದೇ ಅವನನ್ನು ಸಂತೋಷವಾಗಿ ಕಳುಹಿಸಿಕೊಡಬೇಕು. ನಮ್ಮ ತಂದೆ ಸಮಯದಲ್ಲಿ ಸಾಕಷ್ಟು ಗಲಭೆ ಎದ್ದಿತ್ತು. ಆದರೆ ಇವನು ನಮಗೆ ಮಗುವಿದ್ದಂತೆ ಅವನನ್ನು ಪ್ರೀತಿಯಿಂದ ನಾವು ಕಳುಹಿಸಿಕೊಡಬೇಕು ಎಂದಿದ್ದಾರೆ. ಇದನ್ನೂ ಓದಿ: ಅಪ್ಪು ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ: ರಮ್ಯಾ

ಇದೇ ವೇಳೆ ಪುನೀತ್ ರಾಜ್‍ಕುಮಾರ್ ಅವರ ಓರ್ವ ಪುತ್ರಿ ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ಭಾರತಕ್ಕೆ ಆಗಮಿಸುತ್ತಿದ್ದಾರೆ. ಅವರು ಬಂದ ನಂತರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಮತ್ತು ನೆಚ್ಚಿನ ನಟದ ಅಂತಿಮ ದರ್ಶನಕ್ಕೆ ಪ್ರತಿಯೊಬ್ಬರಿಗೂ ಅವಕಾಶ ಮಾಡಿಕೊಡಲಾಗುತ್ತದೆ ಎಲ್ಲರೂ ಶಾಂತಿಯಿಂದ ಇರಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *