ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಜೊತೆ ಮನೆಯಿಂದ ಕುಟುಂಬ ವೈದ್ಯ ಡಾ. ರಮಣರಾವ್ ಅವರ ರಮಣಶ್ರೀ ಕ್ಲಿನಿಕ್‍ಗೆ ಹೋಗಲು ಸಿದ್ಧರಾಗುತ್ತಿದ್ದ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

ಸದಾಶಿವನಗರ ನಿವಾಸದಲ್ಲಿರುವ ಪುನೀತ್ ರಾಜ್‍ಕುಮಾರ್ ಪತ್ನಿಯೊಂದಿಗೆ ಕಾರಿನಲ್ಲಿ ಆಸ್ಪತ್ರೆಗೆ ತೆರಳಲು ಅಣಿಯಾಗುತ್ತಿದ್ದ ಸಂದರ್ಭದ ದೃಶ್ಯ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: ಪುನೀತ್ ಸಮಾಧಿಗೆ ಹಾಲು ತುಪ್ಪ ಕಾರ್ಯ ನೆರವೇರಿಸಿದ ಕುಟುಂಬಸ್ಥರು

ದೃಶ್ಯದಲ್ಲಿ, ಪುನೀತ್ ಅವರ ಅಶ್ವಿನಿ ಬಾಗಿಲ ಬಳಿಯಲ್ಲಿ ನಿಂತು ತಮ್ಮ ಮನೆಯ ಕೆಲಸದವರಿಗೆ ಏನೋ ಸೂಚನೆ ನೀಡುತ್ತಾರೆ. ಆತ ತಕ್ಷಣ ಮನೆಯೊಳಗೆ ಓಡಿ ಹೋಗುತ್ತಾನೆ. ನಂತರ ಪುನೀತ್ ರಾಜ್‍ಕುಮಾರ್ ಹೊರಗಡೆ ಬಂದು ಕಾದು ನಿಂತಿರುತ್ತಾರೆ. ಒಳ ಹೋದ ವ್ಯಕ್ತಿಯು ಪುನೀತ್ ಅವರಿಗೆ ಅಗತ್ಯ ವಸ್ತುವನ್ನು ತಂದುಕೊಡುತ್ತಾರೆ. ನಂತರ ಪುನೀತ್ ಹಾಗೂ ಪತ್ನಿ ಇಬ್ಬರೂ ಕಾರಿನಲ್ಲಿ ಕುಳಿತು ಕ್ಲಿನಿಕ್ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಇದನ್ನೂ ಓದಿ: ಪುನೀತ್ ಬಗ್ಗೆ ಅಶ್ಲೀಲವಾಗಿ ಪೋಸ್ಟ್ – ವ್ಯಕ್ತಿ ಅರೆಸ್ಟ್

 

ಪುನೀತ್ ಅವರು ತಾವು ನಿಧನರಾಗುವ ದಿನ ಬೆಳಿಗ್ಗೆ ಜಿಮ್ ಮುಗಿಸಿದಾಗ, ಯಾಕೋ ಸ್ವಲ್ಪ ವೀಕ್ ಎನಿಸುತ್ತಿದೆ ಎಂದು ತಕ್ಷಣ ಕುಟುಂಬ ವೈದ್ಯರ ಬಳಿಗೆ ತೆರಳುತ್ತಾರೆ. ಪುನೀತ್ ಸಾಕಷ್ಟು ಬೆವರಿರುವುದನ್ನು ಗುರುತಿಸುವ ವೈದ್ಯರು, ಇಸಿಜಿ ಮಾಡಿಸುತ್ತಾರೆ. ನಂತರ ವಿಕ್ರಂ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡುತ್ತಾರೆ. ಪುನೀತ್ ರಾಜ್‍ಕುಮಾರ್ ಅವರಿಗೆ ಆಸ್ಪತ್ರೆಗೆ ತೆರಳುವಷ್ಟರಲ್ಲಿ ಮಾರ್ಗ ಮಧ್ಯೆ ಹೃದಯ ಸ್ತಂಭನವಾಗುತ್ತದೆ. ಆಸ್ಪತ್ರೆಯಲ್ಲಿ ವೈದ್ಯರು ಪ್ರಯತ್ನಿಸಿದರೂ ಅವರನ್ನು ಉಳಿಸಿಕೊಳ್ಳಲು ಆಗುವುದಿಲ್ಲ.

Comments

Leave a Reply

Your email address will not be published. Required fields are marked *