ಪುನೀತ್‌ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಅಭಿಮಾನಿ ಸಾವು

PUNEET FAN

ಕೊಪ್ಪಳ: ನಟ ಪುನೀತ್‌ ರಾಜ್‌ಕುಮಾರ್‌ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

PUNEET

ತಾಲೂಕಿನ ಚಿಕ್ಕ ಬಗನಾಳ ಗ್ರಾಮದ ಜ್ಞಾನಮೂರ್ತಿ ತಿಮ್ಮಣ್ಣ ನಿಂಗಾಪೂರು ( 40) ಮೃತ ದುರ್ದೈವಿ. ಇದನ್ನೂ ಓದಿ: ನಿಜವಾಗಲೂ ಭಗವಂತ ಪುನೀತ್‍ಗೆ ಬಹಳ ದೊಡ್ಡ ಅನ್ಯಾಯ ಮಾಡಿದ್ದಾನೆ: ಚಿರಂಜೀವಿ

ಜ್ಞಾನಮೂರ್ತಿ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದರು. ನೆಚ್ಚಿನ ನಟನ ಅಗಲಿಕೆಯ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದರು. ಅಲ್ಲದೇ ತಾವು ನಡೆಸುತ್ತಿದ್ದ ಕಿರಾಣಿ ಅಂಗಡಿಯಲ್ಲಿ ನಿರಂತರವಾಗಿ ದೃಶ್ಯ ಮಾಧ್ಯಮದಲ್ಲಿನ ಸುದ್ದಿ ನೋಡಿ ಜಿಗುಪ್ಸೆಯಾಗಿದ್ದರು. ಅದೇ ದುಃಖದಲ್ಲಿ ಮಲಗಿದ್ದ ಅವರು ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ. ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ. ಇದನ್ನೂ ಓದಿ: ಅಪ್ಪು ಅವರ ಸಾವು ನಿಜ ಅಂತ ಅನಿಸುತ್ತಿಲ್ಲ: ಅದಿತಿ ಪ್ರಭುದೇವ

PUNEET RAJKUMAR

ಹುಟ್ಟು ಬಡತನದಿಂದ ಬಂದ ಜ್ಞಾನಮೂರ್ತಿಯವರು ಪುನೀತ್ ಎಂದರೇ ಎಲ್ಲಿಲ್ಲದ ಪ್ರೀತಿ. ಅವರ ಯಾವ ಸಿನಿಮಾ ಬಂದರೂ ಫಸ್ಟ್‌ ಶೋ ನೋಡಿಯೇ ಆನಂದಪಟ್ಟು, ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *