ಕರ್ನಾಟಕದಲ್ಲಿ ಮಂಗ್ಳೂರು ವಾಸಯೋಗ್ಯ ನಗರ!

ನವದೆಹಲಿ: ದೇಶದ ವಾಸಯೋಗ್ಯ 111 ನಗರಗಳ ಪಟ್ಟಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ ಮಂಗಳೂರು 41ನೇ ಸ್ಥಾನವನ್ನು ಪಡೆದುಕೊಂಡಿದೆ.

ಈ ಪಟ್ಟಿಯಲ್ಲಿ ಕರ್ನಾಟಕದ 7 ನಗರಗಳು ಸ್ಥಾನವನ್ನು ಪಡೆದುಕೊಂಡಿವೆ. ಮಂಗಳೂರು(41), ಬೆಳಗಾವಿ (52), ಹುಬ್ಬಳ್ಳಿ- ಧಾರವಾಡ(57), ಬೆಂಗಳೂರು(58) ಶಿವಮೊಗ್ಗ(67), ತುಮಕೂರು(70) ದಾವಣಗೆರೆ(83)ನೇ ಸ್ಥಾನ ಪಡೆದಿದೆ.

ಸಚಿವಾಲಯ ಮೊದಲ ಬಾರಿಗೆ ಈ ರೀತಿಯ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳನ್ನು ಪರಿಗಣಿಸಿ ಈ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಗುಣಮಟ್ಟದ ಜೀವನಕ್ಕೆ ಏಷ್ಯಾದಲ್ಲೇ ಮಂಗಳೂರು ನಂಬರ್ ಒನ್, ವಿಶ್ವದಲ್ಲಿ 7ನೇ ಸ್ಥಾನ

ಯಾವ ನಗರಕ್ಕೆ ಎಷ್ಟನೇ ಸ್ಥಾನ?
ಪುಣೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, ನವಿ ಮುಂಬೈ ಮತ್ತು ಗ್ರೇಟರ್ ಮುಂಬೈ ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿದೆ. ನಂತರದ ಸ್ಥಾನವನ್ನು ತಿರುಪತಿ(4), ಚಂಡೀಗಢ(5), ಥಾಣೆ(6), ರಾಯ್ಪುರ(7), ಇಂದೋರ್(8), ವಿಜಯವಾಡ(9), ಭೋಪಾಲ್(10) ಪಡೆದಿವೆ. ದೆಹಲಿಗೆ 65ನೇ ಸ್ಥಾನ ಸಿಕ್ಕಿದರೆ, ಚೆನ್ನೈ 14ನೇ ಸ್ಥಾನ, ವಾರಾಣಸಿ 33ನೇ ಸ್ಥಾನ ಸಿಕ್ಕಿದೆ. ಪಶ್ಚಿಮ ಬಂಗಾಳದ ನಗರಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ.

ಯಾವ ನಗರಗಳು ಎಷ್ಟನೇ ಸ್ಥಾನ ಪಡೆದಿದೆ ಎನ್ನುವುದನ್ನು ತಿಳಿಯಲು ಕ್ಲಿಕ್ ಮಾಡಿ: www.easeofliving.niua.org

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *