ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ದುರ್ಮರಣ!

ಮುಂಬೈ: ಬಾಲಕನೊಬ್ಬನ ಖಾಸಗಿ ಅಂಗಕ್ಕೆ ಕ್ರಿಕೆಟ್‌ ಬಾಲ್‌ ಬಡಿದು ಸ್ಥಳದಲ್ಲಿಯೇ ಮೃಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ. ಬಾಲಕನನ್ನು ಶೌರ್ಯ (11) ಎಂದು ಗುರಿತಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

ಬಾಲಕ ಶೌರ್ಯ ತನ್ನ ಸ್ನೇಹಿತರ ಜೊತೆ ಕ್ರಿಕೆಟ್‌ ಆಟವಾಡುತ್ತಿದ್ದನು. ಅಂತೆಯೇ ಈತ ಬೌಲಿಂಗ್‌ ಮಾಡುತ್ತಿದ್ದಾಗ ಬ್ಯಾಟ್ಸ್‌ಮನ್‌ ನೇರವಾಗಿ ಚೆಂಡನ್ನು ಶೌರ್ಯ ಕಡೆಗೆ ಹೊಡೆದಿದ್ದಾನೆ. ಹೀಗಾಗಿ ಚೆಂಡು ಬಲದಿಂದ ಶೌರ್ಯ ಅವರ ಖಾಸಗಿ ಭಾಗಕ್ಕೆ ಬಂದು ಬಡಿದಿದೆ. ಕೂಡಲೇ ಆತ ಕುಸಿದು ಬಿದ್ದಿದ್ದಾನೆ.

ಕೂಡಲೇ ಸ್ನೇಹಿತರು ಬಂದು ಶೌರ್ಯನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಶೌರ್ಯ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.