ಸಿಐಎಸ್‍ಎಫ್ ಫೈರಿಂಗ್ ರೇಂಜ್‍ನ ಬುಲೆಟ್‍ನಿಂದ ಬಾಲಕ ಜಸ್ಟ್ ಮಿಸ್

ಚೆನ್ನೈ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್), ಸಿಬ್ಬಂದಿ ಶೂಟಿಂಗ್ ರೇಂಜ್‍ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಫೈರಿಂಗ್ ರೇಂಜ್‍ನಿಂದ ಅಡ್ಡಾದಿಡ್ಡಿ ಹಾರಿದ ಬುಲೆಟ್‍ವೊಂದು ಬಾಲಕನ ತಲೆಗೆ ತಾಗಿದ ಘಟನೆ ತಮಿಳುನಾಡಿನ ಪುದುಕೊಟ್ಟೈನ ನರ್ತಮಲೈ ಆವರಣದಲ್ಲಿ ನಡೆದಿದೆ.

ಕೆ ಪುಗಝೆಂಡಿ ಬುಲೆಟ್ ತಗುಲಿದ ಬಾಲಕ. ಪುಗಝೆಂಡಿಯು ತರಬೇತಿ ಮೈದಾನದಿಂದ ಸ್ವಲ್ಪ ದೂರದಲ್ಲಿರುವ ತನ್ನ ಅಜ್ಜನ ಮನೆಯಲ್ಲಿದ್ದನು. ಆಟವಾಡಲೆಂದು ಬಾಲಕನು ಮೈದಾನಕ್ಕೆ ಬಂದಿದ್ದನು. ಇತ್ತ (ಸಿಐಎಸ್‍ಎಫ್) ಸಿಬ್ಬಂದಿ ತರಬೇತಿಯಲ್ಲಿ ನಿರತರಾಗಿದ್ದು, ಬಾಲಕನನ್ನ ಗಮನಿಸಿದೆ ಅವರು ರೈಫಲ್‍ಗಳಿಂದ ಗುಂಡು ಹಾರಿಸಿದ್ದಾರೆ. ಈ ವೇಳೆ ಒಂದು ಬುಲೆಟ್ ಮಿಸ್ ಆಗಿ ಅವನ ತಲೆಗೆ ತಗುಲಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 6 ಭಯೋತ್ಪಾದಕರ ಹತ್ಯೆ

ಬಾಲಕನನ್ನು ತಕ್ಷಣವೇ ಪುದುಕೊಟ್ಟೈ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಂಜಾವೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಪ್ರಕರಣದ ಹಿನ್ನೆಲೆ ಪುದುಕೊಟ್ಟೈ ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನೆಗೆ ಕಾರಣವೇನು ಎಂಬುದರ ಕುರಿತು (ಸಿಐಎಸ್‍ಎಫ್) ಸಿಬ್ಬಂದಿಯೊಂದಿಗೆ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ವಿಚಾರಣೆ ವರದಿ ಬರುವವರೆಗೂ ಫೈರಿಂಗ್ ರೇಂಜ್ ಕಾರ್ಯಾಚರಣೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ

 

Comments

Leave a Reply

Your email address will not be published. Required fields are marked *