ಸಮ್ಮಿಶ್ರ ಸರ್ಕಾರದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಮಾಸ್ಟರ್ ಸ್ಟ್ರೋಕ್!

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪಿಯುಸಿ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ಇನ್ನು ಮುಂದೆ ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡಲು ಮುಂದಾಗಿದೆ.

ಪಿಯುಸಿ ಬೋರ್ಡ್ ಪಿಯುಸಿ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಮತ್ತು ಲ್ಯಾಪ್‍ಟಾಪ್ ನಿಷೇಧ ಮಾಡಿದ್ದು, ಇದರಿಂದ ಪಿಯುಸಿ ಬೋರ್ಡ್ ವಿವಾದಕ್ಕೀಡಾಗಿದೆ. ಕಾಲೇಜು ಅವಧಿಯಲ್ಲಿ ಇನ್ನು ಮುಂದೆ ಮೊಬೈಲ್ ಫೋನ್ ಮತ್ತು ಲ್ಯಾಪ್‍ಟಾಪ್ ಬಳಸುವ ಹಾಗಿಲ್ಲ ಎಂದು ಪಿಯುಸಿ ಬೋರ್ಡ್ ಮಹತ್ವದ ಆದೇಶವನ್ನು ಹೊರಡಿಸಿದೆ. ಇದನ್ನೂ ಓದಿ: ದ್ವಿಚಕ್ರ ವಾಹನ, ಕಾರಿನಲ್ಲಿ ಕಾಲೇಜಿಗೆ ಹೋಗೋರಿಗೆ ಶಾಕಿಂಗ್ ನ್ಯೂಸ್!

ಸರ್ಕಾರಿ, ಅನುದಾನಿತ ಮತ್ತು ಖಾಸಗೀ ಕಾಲೇಜುಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್‍ಟಾಪ್ ಬ್ಯಾನ್ ಮಾಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚನೆ ಮೇರೆಗೆ ಪಿಯುಸಿ ಬೋರ್ಡ್ ಪ್ರಥಮ ಪಿಯುಸಿ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಬ್ಬರಿಗೂ ಮೊಬೈಲ್, ಲ್ಯಾಪ್‍ಟಾಪ್ ಬ್ಯಾನ್ ಮಾಡಿದೆ.

ಈಗಾಗಲೇ ಪಿಯುಸಿ ಬೋರ್ಡ್ ಆದೇಶ ಜಾರಿಗೆ ತರುವಂತೆ ಎಲ್ಲಾ ಉಪ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದೆ. ಪಿಯುಸಿ ಬೋರ್ಡ್ ಆದೇಶದ ಪ್ರತಿ ಪಬ್ಲಿಕ್ ಟಿವಿ ಗೆ ಲಭ್ಯವಾಗಿದೆ.

ಮೊಬೈಲ್ ಓಕೆ ಲ್ಯಾಪ್‍ಟಾಪ್ ಬ್ಯಾನ್ ಯಾಕೆ.? ಎಂದು ಪ್ರಶ್ನೆ ಮೂಡಿದೆ. ಸರ್ಕಾರವೇ ಪದವಿ ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುತ್ತಿದೆ. ಆದರೆ ಪದವಿಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಬ್ಯಾನ್ ಮಾಡದೆ ಪಿಯುಸಿಯಲ್ಲಿ ಬ್ಯಾನ್ ಮಾಡಿದೆ. ಪಿಯುಸಿ ವಾಣಿಜ್ಯ ಶಾಸ್ತ್ರ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಅವಶ್ಯಕವಾಗಿದೆ. ಹೀಗಿದರೂ ಲ್ಯಾಪ್‍ಟಾಪ್ ಪಿಯುಸಿ ಬೋರ್ಡ್ ನಿಷೇಧ ಮಾಡಿದೆ. ಈ ಮೂಲಕ ಸಮ್ಮಿಶ್ರ ಸರ್ಕಾರ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ಯಾ ಎಂಬ ಮಾತು ಕೇಳಿ ಬರುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *