PUBLiC TV Impact ನೂರಾರು ಟನ್‌ ಕಲ್ಲಿದ್ದಲು ಕಳ್ಳತನ – ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಶಾಕ್‌, ತನಿಖೆಗೆ ಆದೇಶ

ರಾಯಚೂರು: ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ (RTPS) ಸಂಪೂರ್ಣವಾಗಿ ತಲುಪಬೇಕಾದ ಕಲ್ಲಿದ್ದಲಿನಲ್ಲಿ (Coal) ದೊಡ್ಡ ಗೋಲ್‌ಮಾಲ್‌ (Golmaal) ನಡೆಯುತ್ತಿರುವುದನ್ನು ಬಯಲಿಗೆಳೆದ ಪಬ್ಲಿಕ್ ಟಿವಿ (PUBLiC TV) ವರದಿಗೆ ಬಿಗ್ ಇಂಪ್ಯಾಕ್ಟ್ ಸಿಕ್ಕಿದೆ.

ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಕೆಪಿಸಿ ಎಂ.ಡಿ ಗೌರವ ಗುಪ್ತ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ.

 

ವ್ಯಾಗನ್ ಸ್ವಚ್ಛತೆ ಹೆಸರಲ್ಲಿ ಗುತ್ತಿಗೆದಾರ ನೂರಾರು ಟನ್ ಕಲ್ಲಿದ್ದಲು ಎತ್ತುವಳಿ ಮಾಡುತ್ತಿರುವುದರ ಹಿಂದೆ ವೈಟಿಪಿಎಸ್ ಅಧಿಕಾರಿಗಳು, ಸಿಬ್ಬಂದಿ ಪಾತ್ರ ಬಯಲಾಗಿದೆ. ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತು ಸ್ಥಳಕ್ಕೆ ಓಡಿ ಬಂದ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.‌

ಕೆಪಿಸಿ ಎಂಡಿ ಅವರ ಖಡಕ್ ಸೂಚನೆ ಮೇರೆಗೆ ಪ್ರಾಥಮಿಕ ವರದಿಯನ್ನು ಕೆಪಿಸಿ ಕೇಂದ್ರ ಕಚೇರಿಗೆ ನೀಡಿದ್ದಾರೆ. ಇಡೀ ಸರ್ಕಾರವೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಗೃಹ ಸಚಿವರು, ಕೃಷಿ ಸಚಿವರು ಸಹ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಕೊರತೆ ಮಧ್ಯೆ ಕಲ್ಲಿದ್ದಲು ಕಳ್ಳಾಟ – ಕಳ್ಳರ ಪಾಲಾಗುತ್ತಿದೆ ಟನ್‌ಗಟ್ಟಲೇ ಕಲ್ಲಿದ್ದಲು

 

ಪಬ್ಲಿಕ್ ಟಿವಿ ಎಳೆ ಎಳೆಯಾಗಿ ವರದಿ ಪ್ರಸಾರ ಮಾಡುತ್ತಿದ್ದಂತೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳು ಕೇಂದ್ರ ಕಚೇರಿಯಿಂದಲೇ ಅಂತಿಮ ವರದಿ ಬರಲಿದೆ ಅಂತ ತಿಳಿಸಿದ್ದಾರೆ. ತನಿಖೆ ಬಳಿಕ ಕಳ್ಳಾಟ ನಡೆಸಿರುವ ಅಧಿಕಾರಿಗಳು ಹಾಗೂ ಕಾಣದ ಕೈಗಳ ವಿವರ ಹೊರಬರಲಿವೆ.