ಗದಗದ ಬಡ ಕುಟುಂಬಕ್ಕೆ `ಪಬ್ಲಿಕ್ ಬೆಳಕು’ – ಸಂಪೂರ್ಣ ಮನೆ ದುರಸ್ತಿ ಮಾಡಿಸಿಕೊಟ್ಟ ಉಸಿರು ಫೌಂಡೇಶನ್

ಗದಗ: ಇಲ್ಲಿನ ವೀರನಾರಾಯಣ ಅಗ್ರಹಾರ ಖಾನತೋಟದ ರೇಖಾ ಭುಷನ್ ಅರಸಿದ್ ಎಂಬ ಬಡ ಕುಟುಂಬದ ಪಾಲಿಗೆ `ಪಬ್ಲಿಕ್ ಟಿವಿ’ ಬೆಳಕಾಗಿದೆ.

ತಂದೆ ಭೂಷಣ್ 2 ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದರು. ತಾಯಿ ರೇಖಾ ಹಾಗೂ 16 ರ್ಷದ ಮಗಳು ಸೃಷ್ಟಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂಥ ಸ್ಥಿತಿ ಎದುರಾಗಿತ್ತು. ಹೀಗಾಗಿ, ಸ್ಥಳೀಯರು ಒಟ್ಟಾಗಿ ಸೇರಿ ಭೂಷಣ್ ಅಂತ್ಯಕ್ರಿಯೆ, ತಿಥಿ ಕಾರ್ಯಗಳನ್ನು ಮಾಡಿದ್ದರು. ರೇಖಾ, ಸೃಷ್ಟಿ ಜೀವನದ ಬಗ್ಗೆ ಪಬ್ಲಿಕ್ ಟಿವಿಯ `ಬೆಳಕು’ (Belaku) ಕಾರ್ಯಕ್ರಮದಲ್ಲಿ ಪ್ರಸಾರವಾಗಿತ್ತು. ಇದನ್ನೂ ಓದಿ: ಗುಜರಾತ್‌ನಲ್ಲಿ ಹೆಸರೇ ಕೇಳದ ಪಕ್ಷಗಳಿಗೆ 4,300 ಕೋಟಿ ದೇಣಿಗೆ – ರಾಗಾ ಮತ್ತೊಂದು ಬಾಂಬ್‌

ಹೃದಯವಂತ ದಾನಿಗಳಾದ ಉಸಿರು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶರಣು ಪಾಟೀಲರು ಅಂದು ಬೆಳಕು ಕಾರ್ಯಕ್ರಮದಲ್ಲಿ ವಾಗ್ದಾನ ಕೊಟ್ಟಿದ್ದರು. ಅದರಂತೆ, ಇದೀಗ 8 ಅಡಿ ಅಗಲ, 30 ಅಡಿ ಉದ್ದ ಇರುವ ಚಿಕ್ಕ ಮನೆಯ ಗೋಡೆಗಳ ಸಂಪೂರ್ಣ ದುರಸ್ತಿ, ತಗಡಿನ ಮೇಲ್ಛಾವಣಿ, ಕಿಟಕಿ, ಬಾಗಿಲು, ಬಾತ್ ರೂಮ್ ಮತ್ತು ಮನೆಗೆ ಸಂಪೂರ್ಣ ವಿದ್ಯುತ್ತೀಕರಣ ಅಳವಡಿಕೆಯನ್ನೂ ಮಾಡಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಮೇಘಸ್ಫೋಟ – 2 ದಿನಗಳಲ್ಲಿ 41 ಮಂದಿ ಸಾವು

ಅಷ್ಟೇ ಅಲ್ಲದೆ, ಎಸ್‌ಎಸ್‌ಎಲ್‌ಸಿ ಓದುತ್ತಿರುವ ಸೃಷ್ಟಿ ಶಿಕ್ಷಣಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ನೀಡಿದ್ದಾರೆ. ಕುಟುಂಬ ನಿರ್ವಹಣೆಗೆ ಸ್ಥಳೀಯ ಕ್ರಾಂತಿ ಸೇನೆ ಸಂಘಟನೆಯು ರೇಷನ್ ಕಿಟ್ ಅನ್ನು ವಿತರಿಸಿದೆ. ಇದೀಗ ಗಣೇಶ ಹಬ್ಬದ ದಿನವೇ ತಾಯಿ ರೇಖಾ ಮತ್ತು ಮಗಳು ಸೃಷ್ಟಿ ಮನೆಗೆ ಕಾಲಿಟ್ಟಿದ್ದಾರೆ.

ಪಬ್ಲಿಕ್ ಟಿವಿ (Public TV) ಹೆಚ್.ಆರ್.ರಂಗನಾಥ್ ಅವರಿಗೆ ಬೆಳಕು ಕಾರ್ಯಕ್ರಮದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಆ ಬಡ ಕುಟುಂಬಸ್ಥರು ನಮಗೆ ಹಾರೈಸಿರುವುದನ್ನು ನೋಡಿದ್ರೆ ತುಂಬಾನೆ ಖುಷಿ ಆಗ್ತಿದೆ ಎಂದು ದಾನಿಗಳು ಹೇಳಿದ್ದಾರೆ. ಅಲ್ಲದೇ ರೇಖಾ ಅವರು ಕೂಡ ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.