ಮುಂದಿನ 24 ಗಂಟೆಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿ ಭಾಗ ಹಾಗೂ ಮಲೆನಾಡಿನ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಭಾಗದಲ್ಲಿ ಕೂಡ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ ದಲ್ಲಿ ವ್ಯಾಪಕ ಮಳೆಯಾಗಲಿದೆ. ಪಬ್ಲಿಕ್ ಟಿವಿಗೆ ಜೊತೆಗೆ ಮಾತನಾಡಿರುವ ಶ್ರೀನಿವಾಸ್ ರೆಡ್ಡಿ, ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಇದರಿಂದಾಗಿ ನಗರದಲ್ಲಿ 100 ಮಳೆ ಮಾಪನ ಕೇಂದ್ರಗಳು ಮಾಡಲಾಗಿದೆ. ಮಳೆಯ ಬಗ್ಗೆ ಬಿಬಿಎಂಪಿ, ಕೆಎಸ್‍ಆರ್ ಟಿಸಿ, ಪೊಲೀಸ್ ಇಲಾಖೆ ಹಾಗೂ ವಾರ್ಡ್ ಮಟ್ಟಕ್ಕೂ ಮಾಹಿತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ವರ್ಷ ಸುರಿದ ಭಾರೀ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿ ಮಾಡಿತ್ತು. ಈ ವೇಳೆ ಅನೇಕ ಸಾವು ನೋವುಗಳು ಕೂಡ ಸಂಭವಿಸಿದ್ದವು. ಇದರಿಂದಾಗಿ ಎಚ್ಚೆತ್ತ ಸರ್ಕಾರ ರಾಜಕಾಲವೆ ತೆರವು ಕಾರ್ಯಚರಣೆ ಪ್ರಾರಂಭಿಸಿತ್ತು.

ದೊಡ್ಡಬೊಮ್ಮಸಂದ್ರದಲ್ಲಿ ಸುಮಾರು 2 ಕಿ.ಮೀ. ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದ್ದು, ಕಾರ್ಯಾಚರಣೆಯಲ್ಲಿ ಬಡವರ ಮನೆಗಳನ್ನು ಮುಲಾಜಿಲ್ಲದೆ ಕಿತ್ತು ಹಾಕಲಾಗಿತ್ತು. ಆದರೆ ಕಾಲುವೆ ತೆರವುಗೊಳಿಸಿ ನಂತರ ಬಿಬಿಎಂಪಿ ಸಿಬ್ಬಂದಿ ಈ ಕಡೆ ತಲೆ ಕೂಡ ಹಾಕಿಲ್ಲ. ಹೀಗಾಗಿ ರಾಜಕಾಲುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇಲ್ಲಿನ ಜನರಿಗೆ ಮತ್ತೇ ಪ್ರವಾಹದ ಭೀತಿ ಎದುರಾಗಿದೆ.

https://youtu.be/ItIVNBZd6AU

Comments

Leave a Reply

Your email address will not be published. Required fields are marked *