ಬೆಳಕು ಇಂಪ್ಯಾಕ್ಟ್: ಜೀವಭಯದಲ್ಲಿ ನಡೆದಾಡ್ತಿದ್ದ ಗ್ರಾಮಸ್ಥರಿಗೆ ಸಿಕ್ಕಿದೆ ಸುಭದ್ರ ಕಾಂಕ್ರೀಟ್ ಸೇತುವೆ

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮರಡಿಹಳ್ಳಿಯ ಜನರು ಶಾಲಾ ಮಕ್ಕಳು, ಪ್ರಾಣ ಪಾಣಕ್ಕಿಟ್ಟು, ಸುಸಜ್ಜಿತ ಅಲ್ಲ- ಸುರಕ್ಷಿತವೂ ಅಲ್ಲದ ಜೀವ ಭಯದಲ್ಲೇ ಮೇಲೆ ನಡೆಯುತ್ತಿದ್ದರು. ಸ್ಥಳೀಯರು ತಮ್ಮದೇ ಆದ ಕೌಶಲ್ಯ ಸಾಮಾಗ್ರಿಗಳನ್ನು ಬಳಸಿ ಸೇತುವೆ ನಿರ್ಮಿಸಿಕೊಂಡಿದ್ದಾರೆ.

ಹೊದಲ-ಹರಳಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಮರಡಿಹಳ್ಳದ ಈ ಸೇತುವೆ ಕೂಲಿ ಕೆಲಸ ಮಾಡೋರು, ಪಕ್ಕದ ಊರಿಗೆ, ಶಾಲೆಗೆ ಹೋಗುವುದು ಇದೇ ಸೇತುವೆ ಮೇಲೆಯೇ ಅಂಗೈಯಲ್ಲಿ ಜೀವವನ್ನ ಹಿಡಿದುಕೊಂಡು ಭಯದಿಂದಲೇ ದಾಟುತ್ತಿದ್ದರು.

ಇಲ್ಲಿಗೆ ಸುಭದ್ರ ಸಂಕ ಅಥವಾ ಪುಟ್ಟ ಸೇತುವೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಬೆಳಕು ಕಾರ್ಯಕ್ರಮದಲ್ಲಿ ತಮ್ಮ ಆಳಲನ್ನು ತೊಡಿಕೊಂಡಿದ್ದರು. ಈ ವೇಳೆ ಪಬ್ಲಿಕ್ ಟಿವಿ ಕೂಡ ಸಮಸ್ಯೆ ಬಗೆಹರಿಸುವುದಾಗಿ ಹೇಳಿ 2016ರ ಜುಲೈ 23ರಂದು ಕಾರ್ಯಕ್ರಮ ಪ್ರಸಾರವಾಗಿತ್ತು.

ಸೇತುವೆಯ ಪರಿಸ್ಥಿತಿ ಹಾಗೂ ಮಕ್ಕಳು, ಗ್ರಾಮಸ್ಥರು ಹರಸಾಹಸ ಪಟ್ಟು, ಜೀವಭಯದಲ್ಲಿ ಅಪಾಯಕಾರಿ ಕಾಲು ಸಂಕ ದಾಟುತ್ತಿರುವ ಬಗ್ಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ತಕ್ಷಣವೇ ಇಲ್ಲಿ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದು, ಯಾವುದೇ ಅಡೆತಡೆ ಇಲ್ಲದೆ ಅನುದಾನ ದೊರಕಿ ಈಗ ಸುಸಜ್ಜಿತ ಸೇತುವೆ ನಿರ್ಮಾಣವಾಗಿದೆ ಅಂತ ಗ್ರಾಪಂ ಸದಸ್ಯ ವಿಶ್ವನಾಥ್ ಪ್ರಭು ತಿಳಿಸಿದ್ದಾರೆ.

ಇಲ್ಲಿನ ಶಾಲಾ ಮಕ್ಕಳು ಗ್ರಾಮಸ್ಥರು ಕೃಷಿ ಕಾರ್ಮಿಕರು ನಿರ್ಭಯವಾಗಿ ಸೇತುವೆ ದಾಟುತ್ತಿದ್ದಾರೆ. ಈ ಹಿಂದೆ ಪ್ರಾಣದ ಆತಂಕ ನಿವಾರಣೆಯಾಗಿದ್ದು, ಸೇತುವೆ ಸಂಕಟದ ಬಗ್ಗೆ ಎರಡು ವರ್ಷಗಳ ಹಿಂದೆಯೇ ಬೆಳಕು ಚೆಲ್ಲಿದ್ದು ಈಗ ಸಾರ್ವಜನಿಕ ಮುಕ್ತವಾಗಿರೋದಕ್ಕೆ ಇಲ್ಲಿನ ಗ್ರಾಮಸ್ಥರು ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.

ಹಲವು ವರ್ಷಗಳಿಂದ ಪ್ರಾಣ ಪಣಕ್ಕಿಟ್ಟು ಸೇತುವೆ ದಾಟುತ್ತಿದ್ದ ಗ್ರಾಮಸ್ಥರಿಗೆ, ಸುಭದ್ರ ಕಾಂಕ್ರೀಟ್ ಸೇತುವೆ ನಿರ್ಮಾಣಗೊಂಡಿರೋದು ನಿಜಕ್ಕೂ ಸಂತಸದ ಬೆಳಕು ಮೂಡಿದೆ ಎಂಬುದು ಶ್ಲಾಘನೀಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=LJ79rtexx6k

 

Comments

Leave a Reply

Your email address will not be published. Required fields are marked *