ಕೊಪ್ಪಳ: ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಪೊಲೀಸರು ಕಲರ್ ಬೋರ್ಡ್ ಗೇಮ್ ದಂಧೆಗೆ ಬ್ರೇಕ್ ಹಾಕಿದ್ದಾರೆ.
ಗಂಗಾವತಿಯಲ್ಲಿ ಕಳೆದ 15 ದಿನದ ಹಿಂದೆ ಕಲರ್ ಬೋರ್ಡ್ ಗೇಮ್ ಆರಂಭವಾಗಿತ್ತು. ಇದು ನೋಡೋಕೆ ಸರಳ ಆಟದಂತೆ ಕಂಡರೂ ಇದನ್ನು ಆಡೋಕೆ ನಿಂತವರು ಹಣ ಕಳೆದುಕೊಳ್ಳುವುದು ಮಾತ್ರ ಪಕ್ಕಾ.
ನಗರದಲ್ಲಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಈ ಕಲರ್ ಗೇಮ್ ಜೂಜು ಅಡ್ಡೆ ವಿರುದ್ಧ ಪಬ್ಲಿಕ್ ಟಿವಿ ಸುದ್ದಿ ಮಾಡಿತ್ತು. ಇದರಿಂದ ಎಚ್ಚೆತ್ತು ಆ ಗೇಮ್ ಸೆಂಟರ್ ಗೆ ಕೊಪ್ಪಳ ಎಸ್ಪಿ ರೇಣುಕಾ ಕೆ ಸುಕುಮಾರ ಅವರು ದಾಳಿ ಮಾಡಿ ಬಂದ್ ಮಾಡಿಸಿದ್ದಾರೆ. ಇದನ್ನು ಓದಿ: ರಾಜ್ಯಕ್ಕೂ ಕಾಲಿಟ್ಟಿದೆ ಗೋವಾದಲ್ಲಿ ನಡೀತ್ತಿದ್ದ ಭಯಾನಕ ದಂಧೆ- ಏನಿದು ಕಲರ್ ಬೋರ್ಡ್?

ಏನಿದು ದಂಧೆ?
ಕೌಂಟರ್ ನಲ್ಲಿ ಹಣ ಕೊಟ್ಟು, 20, 50, 100 ರೂಪಾಯಿಯ ವೋಚರ್ ಪಡೆಯುವ ಯುವಕರು ಜೂಜಾಟದಲ್ಲಿ ಭಾಗಿಯಾಗುತ್ತಾರೆ. ಒಟ್ಟು 6 ಬಣ್ಣದ ದೊಡ್ಡ ಬೋರ್ಡ್ ಗೆ ಮೂರು ಬಾಣ ಎಸೆಯಲಾಗುತ್ತದೆ. ಅದು ಯಾವ ಕಲರ್‍ಗೆ ಹೋಗಿ ಬೀಳುತ್ತೆ ಆ ಕಲರ್ ಗೆ ಮುಂಚೆ ಇಂತಿಷ್ಟು ಹಣ ಎಂದು ಜೂಜು ಕಟ್ಟಲಾಗಿರುತ್ತದೆ. ಒಂದು ವೇಳೆ ಆ ಕಲರ್ ಗೆ ನಿಮ್ಮ ಬಾಣ ಬಿದ್ದರೆ ಅಂತವರಿಗೆ ಹಣ ನೀಡಲಾಗುತ್ತಿತ್ತು. ಒಂದು ವೇಳೆ ಅದು ಮಿಸ್ ಆದರೆ ಆ ಗೇಮ್ ಲಾಸ್ ಅನ್ನುವ ಹೆಸರಿನಲ್ಲಿ ಕಂಪೆನಿ ಅಕ್ರಮವಾಗಿ ಹಣ ಸಂಪಾದಿಸುತ್ತಿತ್ತು. ಈ ಡೆಂಜರ್ ಗೇಮ್ ನ ವಿಡಿಯೋ ಮಾಡಲು ಮುಂದಾದ ಮಾಧ್ಯಮದವರ ಮೇಲೆಯೂ ಹಲ್ಲೆ ನಡೆಸುವ ಪ್ರಯತ್ನ ನಡೆದಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply