ಬೆಂಗಳೂರು: ಮಕ್ಕಳನ್ನು ಯಾವ ಶಾಲೆ ಸೇರಿಸಬೇಕು? ಉತ್ತಮ ಶಿಕ್ಷಣ ನೀಡುವ ಶಾಲೆಗಳು ಯಾವುದು? ಎಲ್ಲಿ ಓದಿದರೆ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು? ಈ ರೀತಿ ಯೋಚನೆ ಮಾಡುತ್ತಿರುವ ಪೋಷಕರಿಗೆ ಗುಡ್ ನ್ಯೂಸ್ ಎಂಬಂತೆ ಪಬ್ಲಿಕ್ ಟಿವಿ `ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ’ ಕಾರ್ಯಕ್ರಮವನ್ನು ಆಯೋಜಿಸಿದೆ.
ಹೌದು. ಪಬ್ಲಿಕ್ ಟಿವಿ ಕಳೆದ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ವಿದ್ಯಾಪೀಠ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ವಿವಿಧ ಕೋರ್ಸ್ ಬಗ್ಗೆ ಅತಿಥಿಗಳಿಂದ ಉಪನ್ಯಾಸ, ಶಿಕ್ಷಣ ಸಂಸ್ಥೆಗಳ ಮಾಹಿತಿಯನ್ನು ಪಡೆದುಕೊಂಡಿದ್ದರು. ಈ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಯುನಿಕ್ ಸ್ಕೂಲ್ ಎಕ್ಸ್‌ಪೋ- 2018 ರ `ಡ್ರೀಮ್ ಸ್ಕೂಲ್ಸ್’ ಕಾರ್ಯಕ್ರಮವನ್ನು ಆಯೋಜಿಸಿದೆ.
ಡಿಸೆಂಬರ್ 22 ಹಾಗೂ 23 ರಂದು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‍ನ ಕಾಳಿಂಗಾ ಹಾಲ್-2 ರಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಹೆಸರಾಂತ ಅಂತರಾಷ್ಟ್ರೀಯ ಶಾಲೆಗಳು, ವಸತಿ ಶಾಲೆಗಳು, ಕಿಂಡರ್ ಗಾರ್ಡನ್, ಮಾಂಟೆಸ್ಸರಿ, ಟಾಪ್ ಸ್ಕೂಲ್‍ಗಳ ಮಾಹಿತಿ ಹಾಗು ವೈಜ್ಞಾನಿಕ ಕಲಿಕೆಗೆ ನೆರವಾಗುವ ಎಲ್ಲಾ ಮಾಹಿತಿಗಳು ಒಂದೇ ಕಡೆಯಲ್ಲಿ ಸಿಗಲಿದೆ.
ಏನೆಲ್ಲ ಇರಲಿದೆ?
ಒಂದೇ ಮಳಿಗೆಯಲ್ಲಿ 20ಕ್ಕೂ ಹೆಚ್ಚು ಶಾಲೆಗಳು, ವಿಶೇಷ ಉಪನ್ಯಾಸಗಳು, ಡ್ರಾಯಿಂಗ್ ಸ್ಪರ್ಧೆ, ಕ್ವಿಜ್ ಸ್ಪರ್ಧೆ, ಮ್ಯಾಜಿಕ್ ಶೋ, ಭಾಗವಹಿಸಿದ್ದ ಸ್ಪರ್ಧೆಗಳಿಗೆ ಗಿಫ್ಟ್, ಸ್ಥಳದಲ್ಲೇ ಅಡ್ಮಿಶನ್ ಮಾಡಬಹುದಾಗಿದೆ.
ಮುಖ್ಯ ಪ್ರಾಯೋಜಕರು
ನ್ಯೂ ಬಾಲ್ಡ್ ವಿನ್ ಇಂಟರ್‍ನ್ಯಾಷನಲ್ ಸ್ಕೂಲ್
ಪ್ಲಾಟಿನಂ ಪ್ರಾಯೋಜಕರು
ಬಿಜಿಎಸ್ ಇಂಟರ್ ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್
ಗೋಲ್ಡ್ ಪ್ರಾಯೋಜಕರು
ಶ್ರೀ ಜಗದ್ಗುರು ರೇಣುಕಾಚಾರ್ಯ ಪಬ್ಲಿಕ್ ಸ್ಕೂಲ್
ಕೇಂಬ್ರಿಡ್ಜ್ ಸ್ಕೂಲ್
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಬಸವರಾಜ್. ಸಿ – 96066 66031
ಮಂಜುನಾಥ್. ಎನ್ – 99000 60891
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply