ಏಡ್ಸ್ ಬಾಧಿತ ಮಕ್ಕಳಿಗೂ ಅಭಯ ನೀಡ್ತಿರೋ ರೇಣುಕಾ ಭೋಸಲೆ ಇವತ್ತಿನ ಪಬ್ಲಿಕ್ ಹೀರೋ

-ದಿಕ್ಕು ಕಾಣದವರಿಗೆ ದಾರಿದೀಪ

ಬೆಳಗಾವಿ: ಕೊಳಚೆ ಪ್ರದೇಶದಲ್ಲಿ ವಾಸಿಸುವ ನಿರುದ್ಯೋಗಿ, ಅನಾಥ, ವಿಧವೆಯರಿತೆ ಅನ್ನದಾತೆ ರೇಣುಕಾ ಭೋಸಲೆ ನಮ್ಮ ಇವತ್ತಿನ ಪಬ್ಲಿಕ್ ಹೀರೋ. ಬೆಳಗಾವಿಯ ಇವರು ಸ್ವಾವಲಂಬಿಗಳಾಗಿ ಬದುಕೋದು ಹೇಗೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ಬೆಳಗಾವಿಯ ಕಣಬಗಿರ್ ನಿವಾಸಿಯಾಗಿರುವ ರೇಣುಕಾ ಅವರ ಪತಿ ಪಾಶ್ರ್ವವಾಯು ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಇದರಿಂದ ಕುಟುಂಬದ ನೊಗ ರೇಣುಕಾ ಹೆಗಲಿಗೆ ಬಂದಿದೆ. ಆದರೆ, ಎದೆಗುಂದ ರೇಣುಕಾ ಅವರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ‘ಆಧಾರ’ ಅನ್ನೋ ಸಂಸ್ಥೆ ಕಟ್ಟಿ ಕಣಬರ್ಗಿ ಗ್ರಾಮದ ಸುತ್ತ ವಾಸಿಸುವ ಅವಿದ್ಯಾವಂತ, ಅನಾಥ, ವಿಧವಾ, ನಿರುದ್ಯೋಗಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿದ್ದಾರೆ. ಮರಾಠಿಗರು-ಕನ್ನಡಿಗರು ಎನ್ನದೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

ನನಗಿಂತ ಕಷ್ಟದಲ್ಲಿರುವ ಮಹಿಳೆಯರನ್ನು ನೋಡಿದಾಗ, ಅವರ ಮುಂದೆ ನನ್ನ ತೊಂದರೆ ಏನು ಇಲ್ಲ ಎಂದು ಧೈರ್ಯ ತೆಗೆದುಕೊಂಡು ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಇಂದು ಅದೇ ವಿಶ್ವಾಸ ನನ್ನನ್ನು ಸ್ವಾವಲಂಬಿ ಜೀವನವನ್ನು ತೋರಿಸಿದೆ.

ಆಧಾರ ಸಂಸ್ಥೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಮಹಿಳೆಯರು ವಿವಿಧ ರೀತಿಯ ಸ್ಕೂಲ್, ಟಿಫನ್, ಟೂರ್ ಬ್ಯಾಗ್‍ಗಳನ್ನು ಹೊಲೆಯುತ್ತಿದ್ದಾರೆ. ಶಾಲಾ-ಕಾಲೇಜು, ವಿವಿಧ ಸಂಸ್ಥೆಗಳಿಂದ ಆರ್ಡರ್ ಪಡೆದುಕೊಂಡು ಸಾವಿರಾರು ಸಂಖ್ಯೆಯಲ್ಲಿ ಬ್ಯಾಗ್ ತಯಾರಿಸುತ್ತಾರೆ. ಈ ಬ್ಯಾಗ್‍ಗಳಿಂದ ಹಣದಲ್ಲಿ ಶೇ.50ರಷ್ಟು ಹಣವನ್ನು ಏಡ್ಸ್ ಬಾಧಿತ ಮಕ್ಕಳ ಚಿಕಿತ್ಸೆಗಾಗಿ ದೇಣಿಗೆಯನ್ನೂ ನೀಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

https://www.youtube.com/watch?v=Pv6HgtS2o1M

Comments

Leave a Reply

Your email address will not be published. Required fields are marked *