ಸರ್ಕಾರಕ್ಕೂ ಮೊದಲೇ ಅಗ್ಗದ ಬೆಲೆಯ ಕ್ಯಾಂಟೀನ್-ಕೈಗೆ ಸಿಕ್ಕಷ್ಟು ಇಡ್ಲಿ, ಪ್ಲೇಟ್ ತುಂಬ ಅನ್ನ

ಹಾಸನದ ರಮೇಶ್ ನಮ್ಮ ಪಬ್ಲಿಕ್ ಹೀರೋ

ಹಾಸನ: ಸರ್ಕಾರದ ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್‍ಗೂ ಮೊದಲೇ ಅಗ್ಗದ ಬೆಲೆಯ ಕ್ಯಾಂಟೀನ್ ಹಾಸನದಲ್ಲಿ ನಡೆಯುತ್ತಿದೆ. ಇದರ ರುವಾರಿಯೇ ನಮ್ಮ ಪಬ್ಲಿಕ್ ಹೀರೋ ರಮೇಶ್.

ಹಾಸನ ನಗರದ ಹೃದಯಭಾಗ ಕಸ್ತೂರಿ ರಸ್ತೆಯಲ್ಲಿ ರಮೇಶ್ ಅವರ ಪುಟ್ಟ ಕ್ಯಾಂಟೀನ್ ಇದೆ. ಇಲ್ಲಿ 10 ರೂಪಾಯಿ ಕೊಟ್ರೆ ಹೊಟ್ಟೆ ತುಂಬುವಷ್ಟು ತಿಂದು ಬರಬಹುದು. ರಮೇಶ್ ಅವರ ವಿಶೇಷ ಏನಪ್ಪಾ ಅಂದ್ರೆ ಇಲ್ಲಿ ಬರುವ ಗ್ರಾಹಕರಿಗೆ ಇವರು ಲೆಕ್ಕ ಹಾಕಿ ಇಡ್ಲಿ ಹಾಕಲ್ಲ, ಬಟ್ಟಲು ಅಳತೆಯಲ್ಲಿ ಅನ್ನವನ್ನು ಹಾಕಲ್ಲ. ಕೈಗೆ ಸಿಕ್ಕಷ್ಟು ಇಡ್ಲಿ, ಪ್ಲೇಟ್ ತುಂಬ ಅನ್ನ ಹಾಕಿಕೊಡ್ತಾರೆ. ಸ್ಥಳೀಯರು ಸೇರಿದಂತೆ ಕಾಲೇಜ್ ವಿದ್ಯಾರ್ಥಿಗಳು, ಡ್ರೈವರ್‍ಗಳು, ಕಾರ್ಮಿಕರು, ನೌಕರರು ಎಲ್ಲಾ ವರ್ಗದವರೂ 10 ರೂಪಾಯಲ್ಲಿ ಹೊಟ್ಟೆ ತುಂಬ ತಿಂದು ಹೋಗ್ತಾರೆ.

ಮೂಲತಃ ಹಾಸನದವರೇ ಆಗಿರುವ ರಮೇಶ್ ಅವರು ಕಳೆದ 35 ವರ್ಷಗಳಿಂದ ಈ ಹೊಟೇಲ್ ನಡೆಸ್ತಿದ್ದಾರೆ. ನನ್ನ ಈ ಕೆಲಸ ಖುಷಿ, ನೆಮ್ಮದಿ ಕೊಡುತ್ತಿದೆ. ಕಡಿಮೆ ರೇಟ್ ಅಂತ ಕಳಪೆ ಆಹಾರ ಕೊಡಲ್ಲ. ಒಳ್ಳೆ ಗುಣಮಟ್ಟದ ಆಹಾರವನ್ನು ಗ್ರಾಹಕರಿಕೆ ನೀಡುತ್ತೇವೆ ಎಂದು ರಮೇಶ್ ಹೇಳಿದರು.

ಅಯ್ಯಪ್ಪ ಸ್ವಾಮಿಯ ಭಕ್ತರಾದ ರಮೇಶ್ ಅವರ ಕ್ಯಾಂಟೀನ್ ಹಸಿದವರ ಹೊಟ್ಟೆ ತಣ್ಣಗಾಗಿಸುವ ಕಾರ್ಯ ಮಾಡ್ತಿದ್ದಾರೆ.

https://www.youtube.com/watch?v=T8yqm2lFEh0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *