ಬಾಲ್ಯದಲ್ಲೇ ಚಿಗುರೊಡೆದ ಸಾಹಿತ್ಯಾಸಕ್ತಿ- 10ನೇ ಕ್ಲಾಸ್‍ಗೆ 2 ಪುಸ್ತಕ ಪ್ರಕಟಿಸಿರೋ ಹಾವೇರಿಯ ಕಾವ್ಯ

ಹಾವೇರಿ: ಇತ್ತೀಚಿಗೆ ಸಾಹಿತ್ಯಾಸಕ್ತರ ಸಂಖ್ಯೆ ಕ್ಷೀಣಿಸ್ತಿದೆ. ಇದಕ್ಕೆ ಕಾರಣ ಮೊಬೈಲ್ ಯುಗವೇ ಅನ್ನಬಹುದು. ಆದರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ಟೋರಿ ವಿಭಿನ್ನವಾಗಿದೆ. 10 ನೇ ತರಗತಿ ಓದುತ್ತಿರುವ ಹಾವೇರಿಯ ಕಾವ್ಯ ತಮ್ಮ ಸಣ್ಣ ವಯಸ್ಸಿನಲ್ಲಿ ಎರಡು ಪುಸ್ತಕ ಪ್ರಕಟಿಸಿದ್ದಾರೆ.

ಕಾವ್ಯ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಂಚಿನೆಗಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ. ಶಾಲಾ ದಿನಗಳಿಂದಲೇ ಸಾಹಿತ್ಯದತ್ತ ಒಲವು ಬೆಳೆಸಿಕೊಂಡ ಕಾವ್ಯ, ತನ್ನ ಒಲವಿಗೆ ಅಕ್ಷರ ರೂಪ ನೀಡಿದ್ದಾರೆ. ಎಳೆ ವಯಸ್ಸಿನಲ್ಲೇ ಕಾವ್ಯ-ಕಮ್ಮಟಗಳಲ್ಲಿ ಭಾಗಿಯಾಗುವುದರ ಜೊತೆಗೆ ತಾನೂ ಕೂಡ `ಎರಡು ಕಣ್ಣು’ ಅನ್ನೋ ಕವನ ಸಂಕಲನ ಹಾಗೂ `ಕಾವ್ಯಾಳ ಐದು ನಾಟಕ’ ಪುಸ್ತಕಗಳನ್ನ ಪ್ರಕಟಿಸಿದ್ದಾರೆ. ಶಾಲಾಮಕ್ಕಳಿಗಾಗಿ ಸಣ್ಣಕಥೆಗಳನ್ನೂ ಸಿದ್ಧಪಡಿಸ್ತಿದ್ದಾರೆ.

ಕಾವ್ಯ ಅವರ ಬರಹಗಳು ಸಾಮಾಜಿಕ ಕಳಕಳಿ ಹೊಂದಿವೆ. ಗ್ರಾಮ ಸ್ವರಾಜ್ಯ, ಆಡಿ-ನಲಿ, ಆರು-ಮಹಾರಾಕ್ಷಸರು, ತೂಕದ ಅಳತೆ ಮತ್ತು ಪ್ರಥಮ ಚಿಕಿತ್ಸೆ ಎಂಬ ನಾಟಕಗಳಲ್ಲಿ ಸಾಮಾಜಿಕ ಜಾಗೃತಿ ಇದೆ. ಬಾಲ ಕವಯಿತ್ರಿ-ಲೇಖಕಿ ಕಾವ್ಯಾಳ ಸಾಹಿತ್ಯ ಕೃಷಿ ಮುಂದುವರಿಯಲಿ ಎಂಬುದು ನಮ್ಮ ಆಶಯ.

https://www.youtube.com/watch?v=1uddzsGXSK0

 

Comments

Leave a Reply

Your email address will not be published. Required fields are marked *