ಮಂಗಳೂರು: ಮದರ್ ಥೆರೆಸಾ ಅವರಿಂದ ಸ್ಫೂರ್ತಿ ಪಡೆದಿರುವ ಜೋಸೆಫ್ ಕ್ರಾಸ್ತಾ ಮಾನಸಿಕ ಅಸ್ವಸ್ಥರಿಗೆ ಆಸರೆ ನೀಡಿ ಅವರ ಜೀವನನಕ್ಕೆ ಬೆಳಕಾಗುತ್ತಿದ್ದಾರೆ.
ಮಂಗಳೂರಿನ ಜೋಸೆಫ್ ಕ್ರಾಸ್ತಾ ಅವರು ಮಾನಸಿಕ ಅಸ್ವಸ್ಥರು, ನಿರ್ಗತಿಕರ ಪಾಲಿನ ಬೆಳಕಾಗಿದ್ದು, `ಸ್ನೇಹಾಲಯ’ ಎಂಬ ಸಂಸ್ಥೆ ಕಟ್ಟಿ ಇವರೆಲ್ಲರಿಗೂ ಆಶ್ರಯದಾತರಾಗಿದ್ದಾರೆ. ಮಾನಸಿಕ ಅಸ್ವಸ್ಥರನ್ನ ಅಸಡ್ಡೆ ಮಾಡುವ ಹಲವರಿಗೆ ಮಾದರಿಯಾಗಿರುವ ಜೋಸೆಫ್ ಕ್ರಾಸ್ತಾ ಎಲ್ಲರನ್ನು ಅಕ್ಕರೆಯಿಂದ ಆರೈಕೆ ಮಾಡುತ್ತಿದ್ದಾರೆ.

ಈ ಹಿಂದೆ ಬಸ್ ಡ್ರೈವರ್ ಆಗಿದ್ದ ಜೋಸೆಫ್ ಅವರು ಬಳಿಕ ಆಟೋ ಚಾಲಕನಾಗಿ ವೃತ್ತಿಜೀವನ ನಡೆಸುತ್ತಿದ್ದರು, ಈ ವೇಳೆ ಒಂದು ದಿನ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಮೀನು ಮಾರ್ಕೆಟ್‍ನಿಂದ ಹರಿದು ಹೋಗುತ್ತಿದ್ದ ದುರ್ನಾತದ ನೀರನ್ನು ಕುಡಿಯುತ್ತಿದ್ದಿದ್ದನ್ನು ಕಂಡು ಅಂದಿನಿಂದ ಆಟೋದಲ್ಲಿ ಐದಾರು ಊಟವನ್ನು ಪಾರ್ಸೆಲ್ ಮಾಡಿಸಿ, ದಾರಿ ಬದಿ ಸಿಗುವ ಮಾನಸಿಕ ಅಸ್ವಸ್ಥರಿಗೆ ಕೊಡಲು ಆಂರಂಭಿಸಿದ್ದರು.
ಸದ್ಯ ತಮ್ಮ ಈ ಸೇವೆಯನ್ನ ಮುಂದುವರಿಸಿದ ಜೋಸೆಫ್ ಅವರಿಗೆ ತಂದೆಯ ಆಸ್ತಿಯಿಂದ ಬಂದ 14 ಲಕ್ಷ ರೂ.ಗಳಿಂದ ತಲಪಾಡಿಯ ತುಮ್ಮಿನಾಡು ಎಂಬಲ್ಲಿ ಅನಾಥಾಲಯ ನಡೆಸುತ್ತಿದ್ದರು. ಬಳಿಕ 2014ರಲ್ಲಿ ಕೇರಳ ಸರ್ಕಾರದ ಸಹಕಾರದಿಂದ ಗಡಿಭಾಗವಾದ ಕುಂಜತ್ತೂರಿನಲ್ಲಿ ನೂತನ ಸ್ನೇಹಾಲಯ ಹೆಸರಿನಲ್ಲಿ ಆಶ್ರಮವನ್ನ ನಿರ್ಮಿಸಿದ್ದಾರೆ. ಅಲ್ಲದೇ ಆಶ್ರಮದಲ್ಲಿ ದಾದಿಯರೂ ಸೇವೆ ಆಯ್ಕೆ ತೆಗೆದುಕೊಂಡು ಹಲವರ ಜೀವನಕ್ಕೆ ಅಸರೆಯಾಗಿದ್ದಾರೆ.
ಸ್ನೇಹಾಲಯ ಆಶ್ರಮದಲ್ಲಿ ಎಲ್ಲಾ ರಾಜ್ಯದವರೂ ಮಾತ್ರವಲ್ಲ ಪಾಕಿಸ್ತಾನದ ಓರ್ವ ಹಾಗೂ ನೇಪಾಳದ ಇಬ್ಬರು ಮಾನಸಿಕ ಅಸ್ವಸ್ಥರೂ ಇದ್ದಾರೆ. ಆಶ್ರಮ ಮಾತ್ರ ಅಲ್ಲ, ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಪರಿಚಾರಕರಿಗೆ ಊಟದ ವ್ಯವಸ್ಥೆಯನ್ನೂ ಮಾಡಿದ್ದಾರೆ.

https://www.youtube.com/watch?v=a44YoEOEin0

Leave a Reply