ಕೆರೆ ಅಭಿವೃದ್ಧಿಗೆ ಕಂಕಣ ಕಟ್ಟಿನಿಂತ್ರು ದಾವಣಗೆರೆಯ ಬಿಸ್ತುವಳ್ಳಿ ಗ್ರಾಮಸ್ಥರು

ದಾವಣಗೆರೆ: ಕೆರೆ ಅಭಿವೃದ್ಧಿಯಾದರೆ ಅಂತರ್ಜಲ ವೃದ್ಧಿಸುತ್ತದೆ. ಆಮೇಲೆ ಇಡೀ ಗ್ರಾಮವೇ ಉದ್ಧಾರ ಆಗುತ್ತೆ. ಇದು ಎಲ್ಲಾ ಕಾಲಕ್ಕೂ ನಿಜವಾದ ಮಾತೇ. ಈ ಮಾತನ್ನ ಸಾಬೀತು ಮಾಡೋಕೆ ಕಂಕಣ ಕಟ್ಟಿರುವ ದಾವಣಗೆರೆಯ ಬಿಸ್ತುವಳ್ಳಿ ಗ್ರಾಮಸ್ಥರೇ ನಮ್ಮ ಪಬ್ಲಿಕ್ ಹೀರೋಗಳಾಗಿದ್ದಾರೆ.

ದಾವಣಗೆರೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದ ಕೆರೆ ಹಲವು ವರ್ಷಗಳಿಂದ ಗ್ರಾಮದ ಬೋರ್‍ವೆಲ್‍ಗಳ ಜಲದ ಸೆಲೆಯಾಗಿತ್ತು. ಆದರೆ ಇತ್ತೀಚೆಗೆ ಹೂಳು ತುಂಬಿ ಕೆರೆ ಮೈದಾನದಂತಾಗಿತ್ತು. ಹೀಗಾಗಿ ಮಳೆ ಬಂದು ಕೆರೆ ಮೂರು-ನಾಲ್ಕು ಕೋಡಿ ಹೋದರೂ ನೀರು ಮಾತ್ರ ಕೆಲವೇ ತಿಂಗಳಲ್ಲಿ ಖಾಲಿಯಾಗುತ್ತಿತ್ತು. ಇದನ್ನ ಮನಗಂಡ ಗ್ರಾಮಸ್ಥರು ಜಿಲ್ಲಾ ಪಂಚಾಯ್ತಿಗೆ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು. ಆದರೂ ಪ್ರಯೋಜನ ಆಗ್ಲಿಲ್ಲ. ಕೊನೆಗೆ ತಾವೇ ಸೇರಿ ಹಣ ಸಂಗ್ರಹಿಸಿ ಜೆಸಿಬಿ ಹಾಗೂ ಟ್ಯಾಕ್ಟರ್ ಮೂಲಕ ಹೂಳೆತ್ತುತ್ತಿದ್ದಾರೆ.

ಬಿಸ್ತುವಳ್ಳಿಯ ಈ ಕೆರೆ 12 ಎಕರೆ ವಿಸ್ತೀರ್ಣದಲ್ಲಿದೆ. ಈ ಹೂಳೆತ್ತುವ ಕಾರ್ಯಕ್ಕೆ ಮೊದಲಿಗೆ ಗ್ರಾಮಸ್ಥರು ಒಲವು ತೋರಿಸಿರಲಿಲ್ಲ. ಆದರೆ ಗ್ರಾಮದ ವಿದ್ಯಾವಂತ ಹಾಗೂ ಉಪನ್ಯಾಸಕರಾದ ಬಿಎನ್‍ಎಂ ಸ್ವಾಮಿ ಗ್ರಾಮಸ್ಥರನ್ನು ಒಗ್ಗೂಡಿಸಿ ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಬಿಎನ್‍ಎಂ ಸ್ವಾಮಿ ಹೇಳಿದ್ದಾರೆ.

ಎಷ್ಟೇ ಕಷ್ಟ ಬಂದರೂ ಕೆರೆಯ ಹೂಳನ್ನ ಸಂಪೂರ್ಣವಾಗಿ ತೆಗೆಯುವರೆಗೂ ಹಿಂದೇಟು ಹಾಕುವ ಮಾತೇ ಇಲ್ಲ ಅಂತ ಗ್ರಾಮದ ಕಲ್ಲೇಶ್ವರ ದೇವಾಲಯದ ಮುಂಭಾಗ ಕಂಕಣವನ್ನೂ ಕಟ್ಟಿದ್ದಾರೆ.

https://www.youtube.com/watch?v=KmXFG-yvQdA

Comments

Leave a Reply

Your email address will not be published. Required fields are marked *