ಶಿಕ್ಷಣ ಕ್ಷೇತ್ರದ ಮಹಾನ್ ಸುಧಾರಕ- ನಿರುದ್ಯೋಗಿಗಳು, ಅನಾಥರಿಗೆ ರಕ್ಷಕರಾಗಿರೋ ಬೆಳಗಾವಿಯ ಬಿಇಓ ಅಜಿತ್

ಬೆಳಗಾವಿ: ಇಂದಿನ ನಮ್ಮ ಪಬ್ಲಿಕ್ ಹೀರೋ ವೃತ್ತಿಯಲ್ಲಿ ಬಿಇಓ. ಆದರೆ ಪ್ರವೃತ್ತಿಯಲ್ಲಿ ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿ. ಪ್ರತಿಭಾವಂತ ಅನಾಥ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಸದ್ದಿಲ್ಲದೆ ಸಹಾಯ ಮಾಡ್ತಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಮೂಡಲಗಿಯ ಬಿಇಓ ಅಜಿತ್ ಮನ್ನಿಕೇರಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಇವರ ಪರಿಶ್ರಮದಿಂದ ಶಿಕ್ಷಣ ಕ್ಷೇತ್ರದಲ್ಲಿ ಮೂಡಲಗಿ ವಲಯ ಹಲವಾರು ವಿಷಯಗಳಲ್ಲಿ ರಾಜ್ಯದಲ್ಲಿಯೇ ಹೆಸರಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ಸತತವಾಗಿ ಮೂರು ವರ್ಷ ಪ್ರಥಮ ಸ್ಥಾನದಲ್ಲಿದೆ. ಶಾಲಾ ಹೆಣ್ಣು ಮಕ್ಕಳಿಂದ ಅವರ ಅಪ್ಪಂದಿರಿಗೆ ಪತ್ರ ಬರೆಸಿ, ಪಾಲಕರೇ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರಣೆ ಮಾಡಿ ಯಶಸ್ಸು ಕಂಡಿದ್ದಾರೆ.

ಪದವಿ ಪಡೆದ 368 ನಿರುದ್ಯೋಗಿಗಳನ್ನ ಗ್ರಾಮೀಣ ಭಾಗದಲ್ಲಿ ಶಿಕ್ಷಕರನ್ನಾಗಿ ನೇಮಿಸಿ ತಮ್ಮ ಸ್ವಂತ ದುಡ್ಡಿನಲ್ಲೇ ಗೌರವ ಧನ ನೀಡ್ತಿದ್ದಾರೆ. ಇದು ದೇಶದಲ್ಲಿಯೇ ಮಾದರಿ ಕೆಲಸ. ಇದರ ಜೊತೆ ಪ್ರತಿ ವರ್ಷ 60 ಪ್ರತಿಭಾವಂತ ಅನಾಥ ಮಕ್ಕಳನ್ನು ಗುರುತಿಸಿ ಅವರನ್ನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿಸುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಇವರ ಸೇವೆ ನಿರಂತರವಾಗಿದೆ.

ಜಾರಕಿಹೊಳಿ ಟ್ರಸ್ಟ್ ಸೇರಿದಂತೆ ವಿವಿಧ ಸಹೃದಯಿಗಳಿಂದ, ಶಾಸಕರು, ಸಂಸದರಿಂದ ಪಡೆದ ಸಹಾಯಧನವನ್ನು ಶಿಕ್ಷಕರಿಗೆ ವೇತನ ನೀಡಲು ಮನ್ನಿಕೇರಿ ಬಳಸುತ್ತಿದ್ದಾರೆ. ಸರಳ ಸಜ್ಜನಿಕೆಗೆ ಹೆಸರಾದ ಅಜಿತ್ ಮನ್ನಿಕೇರಿ ಎಂದರೆ ಈ ಭಾಗದ ಜನರಿಗೆ ಅಚ್ಚು ಮೆಚ್ಚು.

https://www.youtube.com/watch?v=qqKtX6cbL38

Comments

Leave a Reply

Your email address will not be published. Required fields are marked *