ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಹರಳಘಟ್ಟ. ಈ ಗ್ರಾಮದಲ್ಲಿರುವ ನಿವಾಸಿಗಳು ಹೆಳವ ಸಮುದಾಯಕ್ಕೆ ಸೇರಿದವರು. ಇಲ್ಲಿ ವಾಸವಾಗಿರುವ ಎಲ್ಲಾ ಕುಟುಂಬಕ್ಕೆ 1984ರಲ್ಲಿ ಸರ್ಕಾರವೇ ಆಶ್ರಯ ಯೋಜನೆಯಡಿ ಮನೆ ನೀಡಿ ಹಕ್ಕು ಪತ್ರವನ್ನೂ ನೀಡಿದೆ.
1998ರಲ್ಲಿ ಅಧಿಕಾರಿಗಳು ವಾಸವಿದ್ದ ಮನೆಗಳು ಸರ್ವೇ ನಂಬರ್ 4ರ ಆರು ಎಕರೆ ಜಾಗ ಸ್ಮಶಾನಕ್ಕೆ ಸೇರಿದ್ದು, ಸ್ಮಶಾನವೆಂದು ನಮೂದಿಸಿ ಇಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿನ ಗ್ರಾಮಸ್ಥರು ಸಂಬಂಧಪಟ್ಟ ಆಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ರೂ ತಹಶೀಲ್ದಾರ್ ಆಗಲಿ ಜಿಲ್ಲಾಧಿಕಾರಿಗಳು ಮಾತ್ರ ಇವರ ಸಹಾಯಕ್ಕೆ ಬರಲಿಲ್ಲ.

ಸ್ಮಶಾನಕ್ಕೆ ಮೀಸಲಿಟ್ಟ ಜಾಗವೆಂದು ನಮೂದಿಸಿದಾಗಿನಿಂದ ಈ ಹರಳಘಟ್ಟ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಇಲ್ಲದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರು,. ಇಲ್ಲಿನ ಗ್ರಾಮಸ್ಥರ ಮಕ್ಕಳ ವಿದ್ಯಾಭ್ಯಾಸ ಮರೀಚಿಕೆಯಾಗಿದೆ. ಸುಮಾರು 40 ಮನೆಗಳಿದ್ದು ಕೇವಲ 200 ವೋಟ್ ಎಂದು ರಾಜಕಾರಣಿಗಳು ಈ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಅಷ್ಟೇ ಅಲ್ಲ ಅಲೆಮಾರಿ ಫಂಡ್‍ನಿಂದ 20 ಮನೆಗಳ ನಿರ್ಮಾಣಕ್ಕೆ ಹಣ ಮಂಜುರಾಗಿದ್ರು ಸ್ಮಶಾನದ ಜಾಗವೆಂದು ಕಟ್ಟೋದಕ್ಕೆ ಅಧಿಕಾರಿಗಳು ಬಿಡುತ್ತಿಲ್ಲ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಈ ಅಲೆಮಾರಿ ಜನಾಂಗದವರು ಇಂದಿಗೂ ಆತಂಕದಿಂದಲೇ ಬದುಕುತ್ತಿದ್ದಾರೆ.

ಸತತ ಎರಡು ವರ್ಷದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಹಾಗೂ ಸದಸ್ಯ ಸುಧಾಕಾಂತ್ ಸ್ಮಶಾನ ಜಾಗವನ್ನು ಸ್ಥಳಾಂತರಿಸದಿದ್ದರೆ ಗ್ರಾಮಪಂಚಾಯ್ತಿ ಮೆಟ್ಟಿಲು ತುಳಿಯೋದಿಲ್ಲ ಎಂದು ಶಪಥ ಮಾಡಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಇವರ ಹೋರಾಟಕ್ಕೆ ಯಾರು ಬೆಂಬಲ ನೀಡುತ್ತಿಲ್ಲ. ನಮ್ಮ ಹೋರಾಟಕ್ಕೆ ಸಹಾಯ ಮಾಡಿ ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸಿ ಎಂದು ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ. ಸರ್ಕಾರ ಈ ಅಲೆಮಾರಿ ಜನಾಂಗದವರ ನೆರವಿಗೆ ಬರಲಿ ಅನ್ನೋದು ನಮ್ಮ ಆಶಯ.
https://youtu.be/rE8HEQkycPE
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply