ಬೆಂಗಳೂರು: ಬಿರು ಬೇಸಿಗೆಯಿಂದ ಬೆಂಡಾಗಿದ್ದ ಭೂಮಿಗೆ ಕಳೆದ ಎರಡು ದಿನಗಳಿಂದ ಮಳೆರಾಯ ತಂಪೆರರೆದಿದ್ದ. ಆದರೆ ವರುಣ ಆಗಮನದಿಂದ ನಗರದಲ್ಲಿ ಎಂದಿನಂತೆ ಹಲವು ಕೆಲ ಸಮಸ್ಯೆಗಳು ಉದ್ಭವವಾಗಿತ್ತು. ಈ ವೇಳೆ ಜನರ ಸಮಸ್ಯೆಗಳನ್ನು ಆಲಿಸಲು ಬಿಬಿಎಂಪಿ ವಿಫಲವಾಗಿದ್ದರೆ, ಬೆಂಗಳೂರು ಟ್ರಾಫಿಕ್ ಪೊಲೀಸರು ಮಾತ್ರ ಕರ್ತವ್ಯ ನಿರ್ವಹಿಸಿ ಮೆಚ್ಚುಗೆ ಪಡೆದಿದ್ದಾರೆ.
ಚುನಾವಣೆಗೂ ಮುನ್ನ ದಿನ ನಗರದಲ್ಲಿ ಸುರಿದ ಆಕಾಲಿಕ ಮಳೆಯಿಂದ ಕೆಲ ಸಂದರ್ಭದಲ್ಲಿ ರಸ್ತೆ ತುಂಬೆಲ್ಲಾ ನೀರು ತುಂಬಿತ್ತು. ಅದರಲ್ಲೂ ಕೆ.ಆರ್ ಪುರದ ಟಿನ್ ಫ್ಯಾಕ್ಟರಿ ಬಳಿ ರಸ್ತೆಯಲ್ಲಿ ಮಳೆ ನೀರು ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿತ್ತು. ಪರಿಣಾಮ ಕೆ ಆರ್ ಪುರ, ಬಾಣಸವಾಡಿ ಮೇಲ್ ಸೇತುವೆ ಮೇಲೆ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದನ್ನು ಗಮನಿಸಿದ ಕೆ.ಆರ್ ಪುರ ಸಂಚಾರಿ ಪೊಲೀಸರು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
https://twitter.com/Ananthaforu/status/1118512449144012801
ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತಾವೇ ಸ್ವತಃ ಫೀಲ್ಡಿಗಿಳಿದ ಪೊಲೀಸರು ರಸ್ತೆ ಮೇಲೆ ನಿಂತಿದ್ದ ನೀರು ಚರಂಡಿಗೆ ಸೇರಲು ಮ್ಯಾನ್ ಹೋಲ್ ಗಳನ್ನು ಹುಡುಕಿ ಹುಡುಕಿ ಸ್ವಚ್ಚಗೊಳಿಸುವ ಕಾರ್ಯ ನಡೆಸಿದರು. ಪರಿಣಾಮ ಕೇವಲ 20 ನಿಮಿಷದಲ್ಲೇ ನೀರು ಚರಂಡಿ ಸೇರಿ ರಸ್ತೆ ಮಾರ್ಗ ತೆರೆದುಕೊಂಡಿತ್ತು. ಬೆಳಗ್ಗೆಯಿಂದ ಎದುರಿಸುತ್ತಿದ್ದ ಟ್ರಾಫಿಕ್ ಸಮಸ್ಯೆಯೂ ಕೂಡ ಕೆಲವೇ ಸಮಯದಲ್ಲಿ ನಿವಾರಣೆ ಆಯ್ತು.
ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.
@AddlCPTraffic @DcptrNorth @CPBlr pic.twitter.com/QGmPWINYO3
— HEBBALA TRAFFIC BTP (@hebbaltrafficps) April 19, 2019

Leave a Reply