ಪಿಯು ಬೋರ್ಡ್ ಎಡವಟ್ಟು- ವಿದ್ಯಾರ್ಥಿನಿ ಪಾಸ್ ಆದ್ರೂ ಫೇಲ್

ಕೊಪ್ಪಳ: ಪರೀಕ್ಷೆ ಬರೆಯದೇ ಪಾಸ್ ಆಗುವ ಸರ್ಕಾರದ ಆಫರ್ ತಿರಸ್ಕರಿಸಿದ್ದ ವಿದ್ಯಾರ್ಥಿನಿಯ ಭವಿಷ್ಯವೇ ಈಗ ಅತಂತ್ರವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಭೂಮಿಕಾ ಪಿಯು ಬೋರ್ಡ್ ಎಡವಟ್ಟಿನಿಂದ ಫೇಲ್ ಆಗಿದ್ದಾಳೆ.

ವಿದ್ಯಾರ್ಥಿನಿ ಭೂಮಿಕಾ 40 ಅಂಕ ಪಡೆದಿದ್ದರೂ 4 ಅಂಕ ಕೊಟ್ಟು ಅನುತ್ತೀರ್ಣ ಮಾಡಿದ್ದಾರೆ. ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಹಿನ್ನೆಲೆ ಈ ವರ್ಷ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ನಡೆಸದೇ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಪಿಯು ಬೋರ್ಡ್ ತೀರ್ಮಾನಿಸಿತ್ತು. ಆದರೆ ಸರ್ಕಾರದ ಆಫರ್ ತಿರಸ್ಕರಿಸಿದ್ದ ಗಂಗಾವತಿಯ ವೆಂಕಟೇಶ್ವರ ಪಿಯು ಕಾಲೇಜಿನ ಭೂಮಿಕಾ ಪರೀಕ್ಷೆ ಬರೆದಿದ್ದಳು. ಇದನ್ನೂ ಓದಿ: ಸರ್ಕಾರದ ಜಸ್ಟ್ ಪಾಸ್ ಆಫರ್ ತಿರಸ್ಕರಿಸಿದ ವಿದ್ಯಾರ್ಥಿನಿ

ರಾಸಾಯನ ಶಾಸ್ತ್ರದಲ್ಲಿ ಭೂಮಿಕಾ ಪಡೆದದ್ದು 40 ಅಂಕ ಪಿಯು ಬೋರ್ಡ್ ನ ಎಡವಟ್ಟಿನಿಂದ ವಿದ್ಯಾರ್ಥಿನಿಗೆ 4 ಅಂಕ ನೀಡಿ, ಅನುತ್ತೀರ್ಣ ಮಾಡಿದ್ದಾರೆ. ಹೀಗಾಗಿ ವಿದ್ಯಾರ್ಥಿನಿ ಮನನೊಂದು ಕೆಲ ದಿನ ಊಟ ನಿದ್ದೆ ಸಹ ಮಾಡದೆ ಹತಾಶೆಗೊಂಡಿದ್ದಳು. ಬಳಿಕ ಪಾಲಕರು ಪರೀಕ್ಷೆ ಬರೆದ ಉತ್ತರ ಪತ್ರಿಕೆ ಜೆರಾಕ್ಸ್ ಕಾಪಿ ತರಿಸಿ ನೋಡಿದಾಗ ಆಕೆ 40 ಅಂಕ ಪಡೆದಿರೋದು ಗೊತ್ತಾಗಿದೆ. ಇದನ್ನೂ ಓದಿ: ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು – ಶಂಕರ್‌ಗೆ ಮಗನದ್ದೇ ಖೆಡ್ಡಾ

ಪಿಯು ಬೋರ್ಡ್ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಭೂಮಿಕಾ ತಂದೆ ಚಂದ್ರಶೇಖರಗೌಡ ತಾವರಗೇರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ಕೂಡಲೇ ಪಿಯು ಬೋರ್ಡ್ ಮಾಡಿರುವ ತಪ್ಪನ್ನು ತಿದ್ದುಪಡಿ ಮಾಡಿ, ವಿದ್ಯಾರ್ಥಿನಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.

Comments

Leave a Reply

Your email address will not be published. Required fields are marked *