ಮಹಿಳೆ ಮಾತಾಡಿಲ್ಲ ಅಂತ ರಸ್ತೆಯಲ್ಲೇ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ ಕಾಮುಕ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮತ್ತೊಬ್ಬ ಸೈಕೋ ಕಾಮುಕನ ಬಂಧನವಾಗಿದೆ.

ಬಂಧಿತ ಆರೋಪಿಯನ್ನು ರಾಜಸ್ಥಾನ ಮೂಲದ ಕೃಪಾರಾಮ್ ಎಂದು ಗುರುತಿಸಲಾಗಿದ್ದು, ಬಾಗಲಗುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕಾಮುಕ ಮಹಿಳೆ ಮಾತಾಡಲಿಲ್ಲ ಅಂತ ರಸ್ತೆಯಲ್ಲೆ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದಿದ್ದನು.

ದೂರಿನಲ್ಲಿ ಏನಿದೆ?
ಆರೋಪಿ ಬಾಗಲಗುಂಟೆ ಬಳಿ ಕಟ್ಟಡವೊಂದರಲ್ಲಿ ಗ್ರಾನೈಟ್ ಕೆಲಸ ಮಾಡುತ್ತಿದ್ದನು. ಈ ವೇಳೆ ನನ್ನನ್ನು ಸುಮಾರು ಎರಡು ತಿಂಗಳುಗಳ ಕಾಲ ದಿಟ್ಟಿಸಿ ನೋಡುತ್ತಾ ಕಿರುಕುಳ ನೀಡಿದ್ದಾನೆ. ನಾನು ಮನೆಯಿಂದ ಹೊರಬಂದರೆ ಸಾಕು ಅಡ್ಡ ಗಟ್ಟಿ ನಿಲ್ಲುತ್ತಿದ್ದನು. ಅಷ್ಟೇ ಅಲ್ಲದೇ ಮನೆ ಅಂಗಳದಲ್ಲಿ ಮಗುವಿಗೆ ಊಟ ಮಾಡಿಸುತ್ತಿದ್ದರೆ ಸನ್ನೆ ಮಾಡಿ ಕರೆಯುತ್ತಿದ್ದನು. ನಾನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ನೊಂದ ಗೃಹಿಣಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಡೆಗೆ ಎರಡು ತಿಂಗಳಾದರೂ ಮಹಿಳೆ ತನ್ನತ್ತ ನೋಡಲಿಲ್ಲ, ನನ್ನ ಬಳಿ ಮಾತಾಡಲಿಲ್ಲ ಅಂತ ಕೋಪಗೊಂಡ ಸೈಕೋ ಜನವರಿ 4ರಂದು ಮನೆ ಮುಂದೆ ಮಹಿಳೆ ಕಸಗುಡಿಸುವಾಗ ಬಂದು ಎದುರಿಗೆ ನಿಂತಿದ್ದಾನೆ. ಆದರೆ ಗೃಹಿಣಿ ಆತನತ್ತ ನೋಡಲಿಲ್ಲ. ಆಗ ಕೋಪಗೊಂಡು ಪ್ಯಾಂಟ್ ಬಿಚ್ಚಿ ಮರ್ಮಾಂಗವನ್ನು ಪ್ರದರ್ಶನ ಮಾಡಿದ್ದಾನೆ.

ಇದರಿಂದ ನೊಂದ ಗೃಹಿಣ ತಕ್ಷಣ ಪತಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ಬಾಗಲಗುಂಟೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಕೃಪಾರಾಮನನ್ನ ಪೊಲೀಸರು ಬಂಧಿಸಿದ್ದು, ಪರಪ್ಪನ ಅಗ್ರಹಾರಕ್ಕೆ ಅಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *