ವಾರಸುದಾರರಿಲ್ಲದ 35,000 ಕೋಟಿ ರೂ. RBIಗೆ ವರ್ಗಾವಣೆ

ನವದೆಹಲಿ: ವಾರಸುದಾರರಿಲ್ಲದ ಸುಮಾರು 35,000 ಕೋಟಿಗಳಷ್ಟು ಠೇವಣಿಗಳನ್ನು ಸಾರ್ವಜನಿಕ ವಲಯದ ಬ್ಯಾಂಕ್‍ಗಳು ರಿಸರ್ವ್ ಬ್ಯಾಂಕ್‍ಗೆ ವರ್ಗಾಯಿಸಿದೆ ಎಂದು ಸಂಸತ್ತಿಗೆ (Parliament) ತಿಳಿಸಿದೆ.

ಈ ಬಗ್ಗೆ ಲೋಕಸಭೆಯಲ್ಲಿ ಹಣಕಾಸು ರಾಜ್ಯ ಸಚಿವ ಭಾಗವತ್ ಕರದ್ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಕಾರ್ಯನಿರ್ವಹಿಸದ ಠೇವಣಿಗಳನ್ನು 2023ರ ಫೆ. ಅಂತ್ಯದ ವೇಳೆಗೆ 10.24 ಕೋಟಿ ಖಾತೆಗಳಿಂದ RBIಗೆ 35,012 ಕೋಟಿ ರೂ. ಹಣ ವರ್ಗಾಯಿಸಲಾಗಿದೆ.

ಎಸ್‍ಬಿಐ ಅಗ್ರಸ್ಥಾನದಲ್ಲಿದ್ದು, 8,086 ಕೋಟಿ ವಾರಸುದಾರರಿಲ್ಲದ ಠೇವಣಿಗಳನ್ನು ಹೊಂದಿದೆ. 5,340 ಕೋಟಿ ಕ್ಲೈಮ್ ಮಾಡದ ಠೇವಣಿಗಳೊಂದಿಗೆ (Deposits) ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತರ ಸ್ಥಾನದಲ್ಲಿದೆ. ಇದರ ನಂತರ ಕೆನರಾ ಬ್ಯಾಂಕ್ 4,558 ಕೋಟಿ ರೂ. ಹಾಗೂ ಬ್ಯಾಂಕ್ ಆಫ್ ಬರೋಡಾ 3,904 ಕೋಟಿ ಕ್ಲೈಮ್ ಮಾಡದ ಠೇವಣಿಯನ್ನು ಹೊಂದಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವ ಉಳಿಸುವ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರ – ರಾಗಾ ಗುಡುಗು

ಎಸ್‍ಬಿಐ ಗ್ರಾಹಕರ ಅನುಕೂಲಕ್ಕಾಗಿ, ಮೃತರ ಘಟಕಗಳ ಖಾತೆಗಳಿಗೆ ಸಂಬಂಧಿಸಿದಂತೆ ಕಾನೂನು ಪ್ರಾತಿನಿಧ್ಯವಿಲ್ಲದೆ ಕ್ಲೈಮ್‍ಗಳ ಇತ್ಯರ್ಥದ ಪ್ರಕ್ರಿಯೆಯನ್ನು ನಿಗದಿತ ನಮೂನೆಗಳ ಮಾದರಿಯ ಮೂಲಕ ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳಲು ಎಸ್‍ಬಿಐ ವೆಬ್‍ಸೈಟ್‍ಗಳಲ್ಲಿ ಅಪ್‍ಲೋಡ್ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಜಾರಕಿಹೊಳಿ – ಸವದಿ ಬಣ ರಾಜಕೀಯಕ್ಕೆ ಬ್ರೇಕ್‌; ಹೈಕಮಾಂಡ್‌ ಸಂದೇಶ ರವಾನಿಸಿದ ಜೋಶಿ