ಇನ್ನು ಮುಂದೆ ನಾನು ಪಾಕ್‌ಗೆ ಹೋಗಲ್ಲ: ಡೇರಿಲ್ ಮಿಚೆಲ್

– ಪಾಕ್‌ ಕೆಟ್ಟ ಪರಿಸ್ಥಿತಿಯನ್ನು ಬಿಚ್ಚಿಟ್ಟ ಬಾಂಗ್ಲಾ ಆಟಗಾರ

ದುಬೈ: ಇನ್ನು ಮುಂದೆ ನಾನು ಪಾಕಿಸ್ತಾನಕ್ಕೆ (Pakistan) ಹೋಗುವುದೇ ಇಲ್ಲ ಎಂದು ನ್ಯೂಜಿಲೆಂಡ್‌ ಆಟಗಾರ ‌ ಡೇರಿಲ್‌ ಮಿಚೆಲ್ (Daryl Mitchell) ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂಡಿಯನ್ ಪ್ರೀಮಿಯರ್ ಲೀಗ್ 2025 ಸೀಸನ್ (IPL) ಅನ್ನು ಒಂದು ವಾರ ಸ್ಥಗಿತಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಪಿಎಸ್‌ಎಲ್‌ ಅನ್ನು ಮುಂದೂಡುವುದಾಗಿ ಘೋಷಿಸಿತ್ತು.

ಪಿಸಿಬಿ ಉಳಿದ ಪಿಎಸ್‌ಎಲ್‌ ಪಂದ್ಯಗಳನ್ನು ಕರಾಚಿಯಲ್ಲಿ ನಡೆಸಲು ಬಯಸಿತ್ತು. ಆದರೆ ಆಟಗಾರರು ಆತಂಕ ವ್ಯಕ್ತಪಡಿಸಿದ ನಂತರ ಆಟಗಾರರನ್ನು ದುಬೈಗೆ ಕಳುಹಿಸಿಕೊಟ್ಟಿತ್ತು. ದುಬೈಗೆ ಬಂದ ನಂತರ ಬಾಂಗ್ಲಾದೇಶ ಲೆಗ್ ಸ್ಪಿನ್ನರ್ ರಿಷಾದ್ ಹೊಸೈನ್ ಪಾಕಿಸ್ತಾನದ ಕೆಟ್ಟ ಅನುಭವದ ಬಗ್ಗೆ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬ್ರಹ್ಮೋಸ್‌ ದಾಳಿಗೆ ಬೆಚ್ಚಿ ಗೋಗರೆದು ಕದನ ವಿರಾಮ ಮಾಡಿಸಿದ್ದ ಪಾಕ್‌!

ಸ್ಯಾಮ್ ಬಿಲ್ಲಿಂಗ್ಸ್, ಡೇರಿಲ್ ಮಿಚೆಲ್, ಕುಶಾಲ್ ಪೆರೆರಾ, ಡೇವಿಡ್ ವೈಸ್, ಟಾಮ್ ಕರ್ರನ್‌ ತುಂಬಾ ಭಯಗೊಂಡಿದ್ದರು. ದುಬೈಗೆ ಬಂದ ಬಳಿಕ ಮಿಚೆಲ್ ಇನ್ನು ಮುಂದೆ ಎಂದಿಗೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದರು. ಆಟಗಾರರು ಬಹಳ ಆತಂಕದಲ್ಲಿದ್ದರು ರಿಷದ್ ತಿಳಿಸಿದರು. ಇದನ್ನೂ ಓದಿ: ದಾಳಿ ವೇಳೆ ಕುತಂತ್ರ ಮಾಡಿದ್ರೂ ಭಾರತದ ಉತ್ತರಕ್ಕೆ ಪಾಕ್‌ ತತ್ತರ!

ನಾವು ಹೊರಟ 20 ನಿಮಿಷಗಳ ಬಳಿಕ ವಿಮಾನ ನಿಲ್ದಾಣದ ಬಳಿಯೇ ಕ್ಷಿಪಣಿ ಅಪ್ಪಳಿಸಿದ ವಿಷಯ ದುಬೈಗೆ ಇಳಿದ ನಂತರ ತಿಳಿಯಿತು. ನಮ್ಮ ಕುಟುಂಬ ನಿದ್ದೆಯಿಲ್ಲದೇ ಹಲವು ರಾತ್ರಿಗಳನ್ನು ಕಳೆದಿದೆ ಎಂದು ಹೇಳಿದರು.

 

ಇಂಗ್ಲೆಂಡ್‌ ಆಟಗಾರ ಟಾಮ್‌ ಕರ್ರನ್‌ ಬಗ್ಗೆ ಮಾತನಾಡಿದ ರಿಷಾದ್, ಅವರು ವಿಮಾನ ನಿಲ್ದಾಣಕ್ಕೆ ಹೋದಾಗ ನಿಲ್ದಾಣ ಮುಚ್ಚಲ್ಪಟ್ಟಿದೆ ಎಂದು ತಿಳಿಸಲಾಯಿತು. ವಿಮಾನ ಮುಚ್ಚಿದ ವಿಚಾರ ತಿಳಿದು ಅವರು ಚಿಕ್ಕ ಮಗುವಿನಂತೆ ಅಳಲು ಪ್ರಾರಂಭಿಸಿದರು. ಅವರನ್ನು ಮೂವರಿಂದ ಸಮಾಧಾನ ಮಾಡಲಾಯಿತು ಎಂದು ತಿಳಿಸಿದರು.

ಉಳಿದ ಪಂದ್ಯಗಳನ್ನು ಕರಾಚಿಯಲ್ಲಿ ಆಡಲು ಪಿಸಿಬಿ ಮುಂದಾಗಿತ್ತು. ಈ ನಿಟ್ಟಿನಲ್ಲಿ ವಿದೇಶಿ ಆಟಗಾರರನ್ನು ಮನವೊಲಿಸುವ ಕೆಲಸ ನಡೆಸುತ್ತಿತ್ತು. ಆದರೆ ಹಿಂದಿನ ದಿನ ಇಲ್ಲಿ ಎರಡು ಡ್ರೋನ್‌ ದಾಳಿ ನಡೆದಿರುವ ವಿಚಾರವನ್ನು ಮರೆ ಮಾಡಿದ್ದರು. ಮರು ದಿನ ಡ್ರೋನ್‌ ದಾಳಿ ನಡೆದ ವಿಚಾರ ಗೊತ್ತಾಯಿತು ಎಂದು ರಿಷದ್‌ ನುಡಿದರು.