PSI ಟಾಪರ್ಸ್‍ಗಳ ಅಸಲಿ ಮುಖವಾಡ ಬಯಲು – ತಾತ್ಕಾಲಿಕ ಪಟ್ಟಿಯಲ್ಲಿ ಬೆಂಗ್ಳೂರಿನ 172 ಮಂದಿ ಆಯ್ಕೆ!

PSI CASE TOPERS

ಬೆಂಗಳೂರು: ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಹಿಟ್ ಲಿಸ್ಟ್‌ನಲ್ಲಿರೋದೆ ಬಹುತೇಕ ಟಾಪರ್ಸ್‍ಗಳು. ಪಿಎಸ್‍ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆ ಆಗಿರುವ ಟಾಪರ್ಸ್‍ಗಳೇ ಆರೋಪಿಗಳ ಪಟ್ಟಿಯಲ್ಲಿದ್ದಾರೆ.

ಸರ್ಕಾರ ನೇಮಕಾತಿ ರದ್ದು ಮಾಡುತ್ತಿದ್ದಂತೆ ಸಾಚಾಗಳ ರೀತಿಯಲ್ಲಿ ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಅಭ್ಯರ್ಥಿಗಳೇ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಎಫ್‍ಐಆರ್‍ನಲ್ಲಿ ಎ1, ಎ17 ಆರೋಪಿಗಳಾಗಿದ್ದಾರೆ. ಪ್ರತಿಭಟನೆ ಮಾಡಿ ಶೋ ಕೊಟ್ಟಿದ್ದ ಜಾಗೃತ್ ಎ1 ಆರೋಪಿಯಾಗಿದ್ದು, ರಚನಾ ಎ17 ಆರೋಪಿಯಾಗಿದ್ದಾರೆ. ಪ್ರಕರಣ ಸಂಬಂಧ 22 ಅಭ್ಯರ್ಥಿಗಳಲ್ಲಿ 12 ಮಂದಿಯನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವಥ್ ನಾರಾಯಣ ಹೆಗಲು ಮುಟ್ಟಿಕೊಂಡು ನೋಡಿಕೊಂಡಿದ್ದೇಕೆ: ಡಿಕೆಶಿ ಪ್ರಶ್ನೆ

ರಘುವೀರ್ ಹೆಚ್ ಯು.ಚೇತನ್ ಕುಮಾರ್.ಎಂಸಿ.ವೆಂಕಟೇಶ್ ಗೌಡ ಸಿ, ಮಮತೇಸ್ ಗೌಡ, ಮಧು ಆರ್, ದಿಲೀಪ್ ಕುಮಾರ್ ಸಿಕೆ, ಪ್ರವೀಣ್ ಕುಮಾರ್ ಹೆಚ್‍ಆರ್, ಸೂರ್ಯನಾರಾಯಣ, ನಾಗರಾಜ ಸಿ.ಎಂ ಸೇರಿ ಒಟ್ಟು 12 ಮಂದಿ ಅಭ್ಯರ್ಥಿಗಳನ್ನು ಸಿಐಡಿ ವಶಪಡಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ. ಉಳಿದ ಹತ್ತು ಮಂದಿ ಅಭ್ಯರ್ಥಿಗಳು ತಲೆಮರೆಸಿಕೊಂಡಿದ್ದು ಹೈಗ್ರೌಂಡ್ಸ್ ಪೊಲೀಸರಿಂದ ಹುಡುಕಾಟ ನಡೆಸಲಾಗಿದೆ.

ಇಷ್ಟಲ್ಲದೇ ದರ್ಶನ್ ಗೌಡ ಎಂಬ ಅಭ್ಯರ್ಥಿಯ ಹೆಸರು ಅಕ್ರಮದಲ್ಲಿ ಕೇಳಿ ಬಂದಿದ್ದು, ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟಿದ್ದರು ಅಕ್ರಮದ ಪ್ರಕರಣದಿಂದ ದರ್ಶನ್ ಗೌಡನನ್ನು ಬಚಾವ್ ಮಾಡಲಾಗಿದೆ ಎಂಬ ಗಂಭೀರವಾದ ಆರೋಪ ಕೇಳಿ ಬರುತ್ತಿದೆ. ಸದ್ಯ ಬಂಧಿತ 12 ಆರೋಪಿಗಳನ್ನು ಸಿಐಡಿ ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ – ಕೈ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ: ಅಶ್ವಥ್ ನಾರಾಯಣ

ಪಿಎಸ್ ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 545 ಅಭ್ಯರ್ಥಿಗಳು ಆಯ್ಕೆ ಆಗಿದ್ದು, ಬೆಂಗಳೂರಿನಿಂದ 172 ಜನ ಅಭ್ಯರ್ಥಿಗಳು ಆಯ್ಕೆ ಆಗಿದ್ರು. 172 ಅಭ್ಯರ್ಥಿಗಳಿಗೆ ತಮ್ಮ ಹಾಲ್ ಟಿಕೆಟ್ ಮತ್ತು ಓಎಮ್‍ಆರ್ ಪ್ರತಿಗಳನ್ನು ಹಾಜರುಪಡಿಸಲು ಸೂಚಿಸಿ ನೋಟಿಸ್ ನೀಡಿದ್ದ ಸಿಐಡಿ ಅಧಿಕಾರಿಗಳು. ಅದರಂತೆ 2022ರ ಏಪ್ರಿಲ್ 20, 21, 22 ರಂದು ವಿಚಾರಣೆ ಹಾಜರಾಗಿದ್ದರು 172 ಮಂದಿಯಲ್ಲಿ ಕೇವಲ 4 ಅಭ್ಯರ್ಥಿಗಳು ಕಾರ್ಬನ್ ಕಾಪಿ ಹಾಜರು ಪಡಿಸಿರಲಿಲ್ಲಾ. ಉಳಿದ 168 ಅಭ್ಯರ್ಥಿಗಳು ತಮ್ಮ ಕಾರ್ಬನ್ ಓಎಮ್‍ಆರ್ ಪ್ರತಿಗಳನ್ನು ಹಾಜರುಪಡಿಸಿದ್ರು. 168 ಕಾರ್ಬನ್ ಕಾಪಿಗಳನ್ನು ಎಫ್‍ಎಸ್‍ಎಲ್‍ಗೆ ಸಿಐಡಿ ಕಳುಹಿಸಿಕೊಟ್ಟಿತ್ತು. ಎಫ್‍ಎಸ್‍ಎಲ್ ವರದಿಯಲ್ಲಿ 22 ಅಭ್ಯರ್ಥಿಗಳ ಅಸಲಿ ಓಎಮ್‍ಆರ್ ಮತ್ತು ಓಎಮ್‍ಆರ್ ಕಾರ್ಬನ್ ಪ್ರತಿಯಲ್ಲಿ ವ್ಯತ್ಯಾಸ ಪತ್ತೆಯಾಗಿದೆ.

ಜಾಗೃತ್ ಎಸ್, ಗಜೇಂದ್ರ ಬಿ, ಸೋಮನಾಥ್ ಮಲಿಕಾರ್ಜುನಯ್ಯ, ರಘುವೀರ್ ಹೆಚ್.ಯು, ಚೇತನ್ ಕುಮಾರ್ ಎಂ.ಸಿ, ವೆಂಕಟೇಶ್ ಗೌಡ ಬಿ.ಸಿ, ಮನೋಜ್ ಎ.ಪಿ, ಮನುಕುಮಾರ್ ಜಿ ಆರ್, ಸಿದ್ದಲಿಂಗಪ್ಪ ಪದಶವಾಗಿ, ಮಮತೇಸ್ ಗೌಡ ಎಸ್, ಯಶವಂತಗೌಡ ಹೆಚ್, ನಾರಾಯಣ ಎಂ ಸಿ, ನಾಗೇಶ್ ಗೌಡ ಸಿ.ಎಸ್, ಮಧು ಆರ್, ಯಶವಂತ್ ದೀಪ್ ಸಿ, ದೀಲಿಪ್ ಕುಮಾರ್ ಸಿ.ಕೆ, ರಚನಾ ಹನಮಂತ್, ಶಿವರಾಜ ಜಿ, ಪ್ರವೀಣ್ ಕುಮಾರ್ ಹೆಚ್.ಆರ್, ಸೂರ್ಯನಾರಾಯಣ ಕೆ, ನಾಗರಾಜ ಸಿ.ಎಂ ಮತ್ತು ರಾಘವೇಂದ್ರ ಜಿ.ಸಿ ಸೇರಿ ಒಟ್ಟು 22 ಮಂದಿ ಸಿಐಡಿಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವಥ್ ನಾರಾಯಣ ಸಹೋದರನಿಗೆ ಲಿಂಕ್ : ಉಗ್ರಪ್ಪ ಆರೋಪ

Comments

Leave a Reply

Your email address will not be published. Required fields are marked *