ನಾನು ಪ್ರಾಮಾಣಿಕ ಉತ್ತಮ ವ್ಯಕ್ತಿತ್ವ ಇಟ್ಟುಕೊಂಡಿದ್ದು, ನನ್ನ ಜೀವನವೇ ತೆರೆದ ಪುಸ್ತಕ: ಅಶ್ವಥ್ ನಾರಾಯಣ

– ರಾಜ್ಯದಲ್ಲಿರುವ ಗೌಡರೆಲ್ಲಾ ನಮ್ಮ ಸಂಬಂಧಿಕರು

ಬೆಂಗಳೂರು: ನಾನು ಪ್ರಾಮಾಣಿಕವಾಗಿದ್ದೀನಿ. ಉತ್ತಮ ವ್ಯಕ್ತಿತ್ವ ಇಟ್ಟುಕೊಂಡಿದ್ದೇನೆ. ನನ್ನ ಜೀವನವೇ ತೆರೆದ ಪುಸ್ತಕ. ಜೈಲಿಗೆ ಹೋದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇದಾನಲ್ಲ ಅವನಂತೆ ರಾಜಕಾರಣ ವೃತ್ತಿ ಮಾಡಿಕೊಂಡವನಲ್ಲ ನಾನು ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್‍ಐ ಅಕ್ರಮದಲ್ಲಿ ನನ್ನ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ತಮ್ಮ ಹೇಳಿಕೆ ಬಹಳಷ್ಟು ಬಾರಿ ಕೊಟ್ಟಿದ್ದಾರೆ.ವಿವಿಧ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಕೆಪಿಸಿಸಿ ಆದ್ಯಕ್ಷರು ಬ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿರುವ ವ್ಯಕ್ತಿ. ಬ್ರಷ್ಟಾಚಾರದಲ್ಲಿ ಜೈಲಿಗೆ ಹೋದ ವ್ಯಕ್ತಿ ನನ್ನ ವಿರುದ್ಧ ನಿರಾಧಾರ ಹೇಳಿಕೆ ಕೊಡುತ್ತಿದ್ದಾರೆ. ಅವರ ಪಕ್ಷ ಸೋತು ಸುಣ್ಣವಾದ ಪಕ್ಷ. ಇದೀಗ ಭಯದಿಂದ ಸುಖ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ದಾಖಲೆ ಇಲ್ಲದ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ದಾಖಲೆ ಹಿಡಿದುಕೊಂಡು ಬಂದರೆ ಸ್ವಾಗತಿಸುತ್ತೇನೆ ಎಂದರು. ಇದನ್ನೂ ಓದಿ: ಪಿಎಸ್‌ಐ ಅಕ್ರಮ – ಮಾಜಿ ಸಿಎಂ ಪುತ್ರನ ವಿರುದ್ಧ ದೂರು

Siddaramaiah
ಆರೋಪಗಳಿಗೆ ಯಾವ ಆಧಾರ ಇದೆ. ದರ್ಶನ್ ಗೌಡ ಸಂಬಂಧ ಅಂತ ಆರೋಪಿಸುವುದಲ್ಲ. ಮಾಗಡಿಯವರು ಆಯ್ಕೆ ಆಗಲೇ ಬಾರದಾ? ಸಿಐಡಿ ತನಿಖೆ ಸಮರ್ಪಕವಾಗಿ ನಡೆಯುತ್ತಿದೆ. ಡಿಕೆಶಿ ಹೇಳಿಕೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿರುವುದು ದುರಂತ. ಅವರ ಪಕ್ಷದ ಅಧ್ಯಕ್ಷ ಜೈಲಿಗೆ ಹೋಗಿ ಬಂದವನು. ಈ ಹಗರಣ ಹೊರ ತಂದಿರುವುದು ತನಿಖೆ ಮಾಡುತ್ತಿರುವುದು ಬಿಜೆಪಿ ಸರ್ಕಾರ ಇವರೇನು ಮಾಡಿದ್ರು? ಯಾರ‍್ಯಾರು ಏನು ಹೇಳಿಕೆ ಕೊಡ್ತಾರೋ ಅವರೆ ಅದಕ್ಕೆ ಜವಾಬ್ದಾರರು. ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮದ ಬಗ್ಗೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು. ಇದನ್ನೂ ಓದಿ: ಭ್ರಷ್ಟ, ಸುಲಿಗೆ ಸರ್ಕಾರಕ್ಕೆ ಜನ ಛೀ, ಥೂ ಅಂತ ಉಗಿಯುತ್ತಿದ್ದಾರೆ: ಸಿದ್ದರಾಮಯ್ಯ

ದರ್ಶನ್ ಗೌಡ ಅಷ್ಟೆ ಅಲ್ಲಾ ಮಾಗಡಿಯಲ್ಲಿರುವ ಗೌಡರೆಲ್ಲಾ ನನ್ನ ಸಂಬಂಧಿಕರೆ. ರಾಜ್ಯದಲ್ಲಿರುವ ಗೌಡರೆಲ್ಲಾ ನಮ್ಮ ಸಂಬಂಧಿಕರೆ. ಡಿಕೆಶಿ, ಕುಮಾರಸ್ವಾಮಿ ಸೇರಿದಂತೆ ಎಲ್ಲ ಗೌಡರು ಸಂಬಂಧಿಕರೆ. ವಿಶ್ವದಲ್ಲಿರುವ ಒಕ್ಕಲಿಗರೆಲ್ಲಾ ನಮ್ಮ ಸಂಬಂಧಿಕರು ಜೊತೆಗಿರುವವರು ಹಿಂಬಾಲಕರು. ಹೌದು ನಾನು ವಿಶ್ವ ಮಾನವ ಒಕ್ಕಲಿಗ. ವಿಶ್ವ ಮಾನವ ಆಧಾರಿತವಾಗಿ ತೋರಿಸಿಕೊಟ್ಟವರು ಕುವೆಂಪು. ಅಸಾಯಕರಾಗಿ ಶಿವಕುಮಾರ್ ಮಾತಿಗೆ ಹೇಳಿಕೆ ಕೊಡುವುದು ನಿಜಕ್ಕೂ ದುಃಖಕರ. ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಗ್ಯಾಂಗ್ ಲೀಡರ್. ನಿರಾಧಾರವಾಗಿ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *