ಸೆಪ್ಟೆಂಬರ್ 22ಕ್ಕೆ ಪಿಎಸ್‌ಐ ಪರೀಕ್ಷೆ – 66,000 ಮಂದಿ ಅರ್ಜಿ ಸಲ್ಲಿಕೆ

ಬೆಂಗಳೂರು: ಸೆಪ್ಟೆಂಬರ್ 22ಕ್ಕೆ ಪಿಎಸ್‌ಐ ಪರೀಕ್ಷೆ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority-KEA)) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

402 ಪೊಲೀಸ್ ಸಬ್ ಇನ್ಸ್ಪೆಕ್ಟರ್(Police Sub-Inspector-PSI) ಹುದ್ದೆಗಳಿಗೆ ನಡೆಯಲಿರುವ ಪರೀಕ್ಷೆಗೆ ಒಟ್ಟು 66,000 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆಗೆ ಒಂದು ವಾರ ಮೊದಲು ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಜೈಲಿನಲ್ಲಿ ಬೀಡಿ, ಸಿಗರೇಟಿಗಾಗಿ ಕೈದಿಗಳ ಪ್ರತಿಭಟನೆ

ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ ಪರೀಕ್ಷೆ ಸೆ.29ರಂದು ನಡೆಯಲಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಅಕ್ಟೋಬರ್ 27ಕ್ಕೆ ನಡೆಯುವ ಪ್ರಮುಖ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ. 1000 VAO ಹುದ್ದೆಗಳಿಗೆ 5.7 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು ಈ ಪರೀಕ್ಷೆಗೂ ತಯಾರಿ‌ ನಡೆಸಲಾಗಿದೆ‌.

UGNEET24 ಸೀಟು ಪಡೆದ ಕೆಲವು ಅಭ್ಯರ್ಥಿಗಳು ಯೂನಿಯನ್ ಬ್ಯಾಂಕಿನ‌ ಚಲನ್‌ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸದೇ ಇದ್ದರೆ ಅಂತಹವರು ಅದೇ ಬ್ಯಾಂಕಿನಲ್ಲಿ ಹಣ ಕಟ್ಟಬಹುದು. ಇತರ ಬ್ಯಾಂಕ್ ಗಳ ಚಲನ್ ಡೌನ್‌ಲೋಡ್ ಮಾಡಿಯೂ ಪಾವತಿಸಬಹುದು. ಗೊಂದಲ ಬೇಡ ಅಂತಹವರಿಗೆಲ್ಲರಿಗೂ ಪ್ರವೇಶ ಪತ್ರ ಡೌನ್‌ಲೋಡ್ ಆಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.  ಇದನ್ನೂ ಓದಿ: ರಾಯರ ಆರಾಧನೆಗೆ ಗುರುವಾರ ಬ್ರೇಕ್ ಕೊಡಿ ಅಂದ್ರೆ ಹೇಗಿರುತ್ತೆ? – ಜೋಶಿ