ರಾತ್ರಿ ಒಣಹಾಕಿದ್ದ ಹೆಣ್ಮಕ್ಕಳ ಒಳಉಡುಪು ಬೆಳಗ್ಗೆ ಮಾಯ- ಆತಂಕದಲ್ಲಿ ನಿವಾಸಿಗಳು

ಬೆಂಗಳೂರು: ರಾತ್ರಿ ಒಣಹಾಕಿದ ಬಟ್ಟೆ ಕಾಣೆಯಾಗುತ್ತದೆ. ಗಂಡಸರ ಬಟ್ಟೆ ಮಾತ್ರ ಇದ್ದ ಜಾಗದಲ್ಲೇ ಇರುತ್ತದೆ. ಆದರೆ ಹೆಣ್ಣು ಮಕ್ಕಳ ಬಟ್ಟೆ ಮಾತ್ರ ಮಾಯವಾಗಿರುತ್ತದೆ. ಏನ್ ಆಗುತ್ತಿದೆ, ಯಾರಾದರೂ ತೆಗೆದುಕೊಂಡು ಹೋಗುತ್ತಿದ್ದಾರಾ ಎಂದು ಗೊತ್ತಾಗದೆ ಇಷ್ಟು ದಿನ ತಲೆ ಕೆಡಿಸಿಕೊಳ್ಳುತ್ತಿದ್ದ ನಿವಾಸಿಗಳಿಗೆ ಒಳ ಉಡುಪು ಎಲ್ಲಿ ಹೋಗ್ತಿದೆ ಅನ್ನೊದು ತಿಳಿದು ಬಂದಿದೆ.

ಹಲಸೂರು ಲೇಕ್ ಬಳಿಯ ಕಲ್ಲಹಳ್ಳಿ ಸೆಕೆಂಡ್ ಫೇಸ್ ಬಿಡಿಎಯ 400 ಮನೆಗಳಿರುವ ಅಪಾರ್ಟ್ ಮೆಂಟ್ ಮೇಲೆ ಬಟ್ಟೆ ಒಣ ಹಾಕಿದರೆ ಬೆಳಗಾಗೋದರೊಳಗೆ ಅವು ಮಾಯವಾಗಿ ಬಿಡುತ್ತವೆ. ಇದು ಯಾವುದೋ ಶಕ್ತಿಯ ಕೃತ್ಯ ಅಲ್ಲ. ಇಲ್ಲೊಬ್ಬ ಸೈಕೋ ಅಪಾರ್ಟ್ ಮೆಂಟ್ ಮೇಲೆ ಒಣಗಾಕಿರೋ ಹೆಣ್ಣುಮಕ್ಕಳ ಒಳ ಉಡುಪುಗಳನ್ನ ಮಾತ್ರ ಕದಿಯುತ್ತಿದ್ದಾನೆ. ಮೊದಲೆಲ್ಲ ಒಂದೋ ಎರಡೋ ಬಟ್ಟೆಗಳು ಮಿಸ್ ಆಗುತ್ತಿತ್ತು. ಅಕ್ಕಪಕ್ಕದ ಮನೆಯವರ ಬಟ್ಟೆಗಳಲ್ಲಿ ಮಿಕ್ಸ್ ಆಗಿರಬಹುದು ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಒಂದು ವಾರದಿಂದ ಸತತವಾಗಿ ಎರಡು ದಿನ ಸಂಪೂರ್ಣ ಹೆಣ್ಣು ಮಕ್ಕಳ ಒಳ ಉಡುಪನ್ನ ಕದಿಯುತ್ತಿದ್ದರಿಂದ ಅವನ್ಯಾರೋ ಸೈಕೋ ಎಂದು ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಸೆಕ್ಯೂರಿಟಿ ಕೊಟ್ಟಿಲ್ಲ. ಪ್ರತಿಕ್ಷಣ ಭಯದಲ್ಲಿ ಬದುಕುತ್ತಿದ್ದೇವೆ. ಪುರುಷರು ಕೆಲಸಕ್ಕೆ ತೆರಳಿದ ಬಳಿಕ ನಾವು ಮನೆಗಳಲ್ಲಿ ಇರೋಕೆ ಭಯ ಆಗುತ್ತದೆ. ಸಣ್ಣ ಸಣ್ಣ ಮಕ್ಕಳಿದ್ದಾರೆ. ಏನಾದ್ರೂ ತೊಂದರೆಯಾದರೆ ಏನ್ ಮಾಡೋದು. ಅವನ್ಯಾರೋ ಡ್ರಗ್ಗಿಸ್ಟ್ ಅನ್ನಿಸುತ್ತದೆ. ಹೆಣ್ಣುಮಕ್ಕಳ ಒಳಉಡುಪು ಒಂದೂ ಬಿಡದೇ ಕದ್ದೊಯ್ಯುತ್ತಿದ್ದಾನೆ. ಪದೇ ಪದೇ ಈ ರೀತಿ ಆಗುತ್ತಿದೆ. ದಯವಿಟ್ಟು ಸಂಬಂಧಪಟ್ಟವರು ನಮಗೆ ರಕ್ಷಣೆ ನೀಡಬೇಕಿದೆ ಎಂದು ಅಪಾರ್ಟ್ ಮೆಂಟ್ ನಿವಾಸಿಗಳು ಮನವಿ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *