ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ – ನಿಷೇಧಿತ ವಸ್ತುಗಳು ಪತ್ತೆ

ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲು ಅಕ್ರಮದ ಅಡ್ಡೆಯಾಗಿ ಪರಿವರ್ತನೆ ಆಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಷೇಧಿತ ವಸ್ತುಗಳ ಹೆಚ್ಚಾಗಿ ಬಳಕೆಯಾಗುತ್ತಿವೆ. ಅಕ್ರಮವಾಗಿ ನಿಷೇಧಿತ ವಸ್ತು ಬಳಕೆಯಾಗುತ್ತಿರುವ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಸೋಮವಾರ ದಾಳಿ ಮಾಡಿದ್ದಾರೆ.

ಜೂನ್ 16ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೂ ಜೈಲಿನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಸಿಸಿಬಿ ದಾಳಿ (CCB Raid) ವೇಳೆ ಅಪಾರ ಪ್ರಮಾಣದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಪರಪ್ಪನ ಅಗ್ರಹಾರ ಕಾರಾಗೃಹದ ಸಜಾಬಂಧಿ ಬ್ಯಾರಕ್ ಹಾಗೂ ವಿಐಪಿ ಬ್ಯಾರಕ್‌ನಲ್ಲಿ ಸಿಸಿಬಿಯ ಐವತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಶೋಧ ಕಾರ್ಯ ನಡೆಸಿದ್ದರು. ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ ಪ್ರಕರಣ – ಹೇಳಿಕೆ ಕೊಡಲು ಪೊಲೀಸರನ್ನು ಸತಾಯಿಸುತ್ತಿರುವ ಸೋನು ನಿಗಮ್

ದಾಳಿ ವೇಳೆ ಕಸೂರಿ ಮೇತಿ ಸೊಪ್ಪು, ಬೀಡಿ ಪ್ಯಾಕೆಟ್ಸ್, ಗಾಂಜಾ ಚಿಲ್ಲಂಸ್, ಮೊಳೆಗಳು, ಹರಿತವಾದ ವಸ್ತುಗಳು, ಗುಟ್ಕಾ ತಂಬಾಕು ಪ್ಯಾಕೆಟ್ಸ್, ಸುಣ್ಣದ ಡಬ್ಬಿ, ಡೈರಿಗಳು, ಚಾಕುಗಳು, ನಗದು ಹಣ, ಮೊಬೈಲ್ ಚಾರ್ಜರ್, ಕತ್ತರಿ, ಕಬ್ಬಿಣದ ರಾಡ್ ಪತ್ತೆಯಾಗಿದೆ. ಇದನ್ನೂ ಓದಿ: EXCLUSIVE | ಲೋಕಾಯುಕ್ತ ಲಂಚ ಪ್ರಕರಣಕ್ಕೆ ಡೈರಿ ಮಿಸ್ಟರಿ – ನಿಂಗಪ್ಪ ಮನೆಯಲ್ಲಿದ್ದ 2 ಡೈರಿ ರಿಕವರಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಷೇಧಿತ ವಸ್ತುಗಳ ಬಳಕೆಯಾಗುತ್ತಿರುವ ಬಗ್ಗೆ ಸಿಸಿಬಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.