ಕನ್ಯತ್ವದ ಬಗ್ಗೆ ಪೋಸ್ಟ್ ಹಾಕಿ, ಅದು ಸಂಡೇ ಫನ್ ಎಂದ ಪ್ರೊಫೆಸರ್!

ಕೋಲ್ಕತ್ತಾ: ಕನ್ಯತ್ವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದ ಪ್ರೊಫೆಸರ್, ಅದು ನನ್ನ ಸಂಡೇ ಫನ್ ಅಂದು ಹೇಳುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಜಾಧವ್‍ಪುರ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಕನಕ್ ಸರ್ಕಾರ್ ಕನ್ಯತ್ವದ ಬಗ್ಗೆ ಅಶ್ಲೀಲವಾಗಿ ಫೇಸ್‍ಬುಕ್‍ನಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಆದರಿಂದ ಅವರ ಅನಿಸಿಕೆಯ ಬಗ್ಗೆ ಸಾಕಷ್ಟು ಟೀಕೆ, ವ್ಯಕ್ತವಾಗಿ ವಿವಾದ ಸೃಷ್ಟಿಯಾಗಿತ್ತು. ವಿರೋಧ ಅಭಿಪ್ರಾಯಗಳು ಪ್ರಕಟವಾಗುತ್ತಿದ್ದಂತೆ, ನಾನು ಭಾನುವಾರದ ಮಜಾ ತೆಗೆದುಕೊಳ್ತಿದ್ದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.  ಇದನ್ನೂ ಓದಿ: ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ : ಕನ್ಯತ್ವದ ಬಗ್ಗೆ ಪ್ರೊಫೆಸರ್ ಪೋಸ್ಟ್

ಸರ್ಕಾರ್‍ರ ಅನಿಸಿಕೆ ಬಗ್ಗೆ ಖುದ್ದು ವಿವಿಯ ಕುಲಪತಿ ಸುರಂಜನ್ ದಾಸ್ ವಿರೋಧ ವ್ಯಕ್ತಪಡಿಸಿದ್ದು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕೂಡ ಪ್ರೊ. ಸರ್ಕಾರ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಇನ್ನು ಮುಂದೆ ಸರ್ಕಾರ್ ನಮಗೆ ಪಾಠ ಮಾಡುವುದು ಬೇಡ. ಇಂತವರಿಂದ ಯುವ ಜನಾಂಗದ ಮನಸ್ಸು ಹಾಳಾಗುತ್ತಿದೆ. ಜಾಧವ್ ಅವರನ್ನು ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.

ಪ್ರತಿಭಟನೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರೊ. ಸರ್ಕಾರ್, ಎಲ್ಲರಿಗೂ ಮಾತನಾಡುವ ಹಕ್ಕು ಇದ್ದು, ನಾನು ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೆ. ಸೇವೆಯಿಂದ ವಜಾಗೊಳಿಸಿದರೆ ನನ್ನ ವಾಕ್ ಸ್ವಾತಂತ್ರ್ಯವನ್ನು ಹರಣ ಮಾಡಿದಂತೆ ಎಂದು ಹೇಳಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *