ಐಟಿ ಅಧಿಕಾರಿಯ ಸೋಗಿನಲ್ಲಿ ಉದ್ಯಮಿ ಕಿಡ್ನಾಪ್‍ಗೆ ಪ್ಲಾನ್ – ಸಿನಿಮಾ ನಿರ್ಮಾಪಕ ಸೇರಿದಂತೆ ನಾಲ್ವರ ಬಂಧನ

Producer Shashikumar

ಬೆಂಗಳೂರು: ಐಟಿ ಅಧಿಕಾರಿಯ ಸೋಗಿನಲ್ಲಿ ಉದ್ಯಮಿಯನ್ನು ಕಿಡ್ನಾಪ್ ಮಾಡಿದ್ದ ಸಿನಿಮಾ ನಿರ್ಮಾಪಕ ಶಶಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.

2015ರಲ್ಲಿ ಹಾಫ್ ಮೆಂಟಲ್ ಎಂಬ ಸಿನಿಮಾವನ್ನು ನಿರ್ಮಿಸಿದ್ದ ಶಶಿಕುಮಾರ್ ನಷ್ಟ ಅನುಭವಿಸಿದ್ದರು. ಬಡ್ಡಿ, ಚಕ್ರಬಡ್ಡಿ ಎಂದು ಸಾಲಗಾರರ ಕಾಟಕ್ಕೆ ಬೇಸತ್ತು, ಕೊನೆಗೆ ಹೇಗಾದರೂ ದುಡ್ಡು ಮಾಡಬೇಕೆಂದು ಯೋಚಿಸಿ ನಾಲ್ವರು ಆರೋಪಿಗಳೊಂದಿಗೆ ಸೇರಿ ಸಿನಿಮಾ ಸ್ಕ್ರಿಪ್ಟ್ ರೀತಿಯಲ್ಲಿಯೇ ವಾರಗಟ್ಟಲೇ ಕೂತು ಕಿಡ್ನಾಪ್‍ ಮಾಡುವುದರ ಬಗ್ಗೆ ಸ್ಕೇಚ್ ಹಾಕಿದ್ದರು. ಕಿಡ್ನಾಪ್‍ ಮಾಡಿದ್ರೆ ಯಾರನ್ನು ಮಾಡಬೇಕು, ಕಿಡ್ನಾಪ್‍ ಸ್ಟೈಲ್ ಹೇಗಿರಬೇಕು ಎಂದು ಪ್ಲಾನ್ ಮಾಡಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

half mental

ಈ ವೇಳೆ ಬಸವೇಶ್ವರ ನಗರ ವಾಸಿ ಈರುಳ್ಳಿ ವ್ಯವಹಾರ ಮಾಡುತ್ತಿದ್ದ ಉದ್ಯಮಿ ಶ್ರೀನಿವಾಸನ್ ಬಳಿ ಕೋಟ್ಯಾಂತರ ಹಣ ಇದೆ ಎಂಬ ಮಾಹಿತಿ ಕಲೆಹಾಕಿದ ಆರೋಪಿಗಳು, ನಂತರ ಐಟಿ ಅಧಿಕಾರಿಗಳ ಸೋಗಿನಲ್ಲಿ ಕಿಡ್ನಾಪ್‍ ಮಾಡಬೇಕೆಂದು ಪ್ಲಾನ್ ಮಾಡಿದರು. ಅದರಂತೆ ಸೆಪ್ಟೆಂಬರ್30 ರಂದು ಇನ್ನೋವಾ ಕಾರಿನಲ್ಲಿ ಬರುತ್ತಿದ್ದ ಶ್ರೀನಿವಾಸನ್ ಕಾರನ್ನು ಅಡ್ಡಗಟ್ಟಿದ್ದರು. ಐಟಿ ಅಧಿಕಾರಿಗಳ ರೀತಿನೇ ಇನ್ನೊವಾ ಕಾರು, ಟಫ್ ಆಫೀಸರ್‌ಗಳ ರೀತಿ ಡ್ರೆಸ್ ಧರಿಸಿದ್ದ ಆರೋಪಿಗಳು, ನಾವು ಐಟಿ ಅಧಿಕಾರಿಗಳು, ನಿನ್ನ ಬಗ್ಗೆ ತೆರಿಗೆ ವಂಚನೆ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲಾವಿದರ ಸಾವು ಉದ್ಯಮದಲ್ಲಿ ಸಂಪತ್ತಿನ ಕೊರತೆಯಂತೆ – ಸತ್ಯಜಿತ್ ನಿಧನಕ್ಕೆ ಎಸ್ ನಾರಾಯಣ್ ಕಂಬನಿ

ನಂತರ ನೀನು ಒಂದುವರೆ ಕೋಟಿ ಟ್ಯಾಕ್ಸ್ ವಂಚನೆ ಮಾಡಿರುವ ಬಗ್ಗೆ ದಾಖಲೆಗಳಿವೆ. 50 ಲಕ್ಷ ಹಣ ನೀಡದೇ ಇದ್ದರೆ, ಕೇಸ್ ಹಾಕಿ ಒಳಗೆ ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ಕೊನೆಗೆ ಇಪ್ಪತ್ತು ಲಕ್ಷಕ್ಕೆ ಡೀಲ್ ಕುದುರಿಸಿ ನಾಳೆ ಹಣ ತಂದು ಕೊಡುವಂತೆ ಶ್ರೀನಿವಾಸನ್‍ನನ್ನು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಅನುಮಾನಗೊಂಡ ಉದ್ಯಮಿ ಶ್ರೀನಿವಾಸನ್ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಕೂಡಲೇ ಹೋಗಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಹಾಫ್ ಮೆಂಟಲ್ ಸಿನಿಮಾ ನಿರ್ಮಾಪಕ ಶಶಿಕುಮಾರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *