ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ ಪ್ರೋ ಕಬಡ್ಡಿ ಫೈನಲ್ ಪಂದ್ಯದಲ್ಲಿ ಕಡೆಯ ಸೆಕೆಂಡ್‍ನಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 36 – 37, 1 ಅಂಕದ ಮುನ್ನಡೆಯಿಂದ ವಿಜಯ ಪತಾಕೆ ಹಾರಿಸಿದ ದಬಾಂಗ್ ಡೆಲ್ಲಿ ಚಾಂಪಿಯನ್ ಆಗಿದೆ.

4 ಬಾರಿ ಫೈನಲ್ ಪ್ರವೇಶಿಸಿದ ಪಾಟ್ನಾಗೆ ಫೈನಲ್ ಪಂದ್ಯದಲ್ಲಿ ಡೆಲ್ಲಿ ಟಕ್ಕರ್ ನೀಡಿದೆ. ಡೆಲ್ಲಿಯ ವಿಜಯ್ ಮಲಿಕ್ ಮತ್ತು ನವೀನ್ ಎಕ್ಸ್‌ಪ್ರೆಸ್ ಖ್ಯಾತಿಯ ನವೀನ್ ಕುಮಾರ್ ಭರ್ಜರಿ ರೈಡ್ ಮೂಲಕ ಪಾಟ್ನಾಗೆ ಪಂಚ್ ನೀಡಿದರು. ಕೊನೆಯ ಸೆಕೆಂಡ್ ವರೆಗೆ ರೋಚಕವಾಗಿ ಕೂಡಿದ ಪಂದ್ಯದಲ್ಲಿ ಎರಡು ತಂಡಗಳು ಕೂಡ ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಯಿತು. ಎರಡು ತಂಡಗಳು ಕೂಡ ಬಲಿಷ್ಠ ಕಾದಾಟ ನಡೆಸಿ ಪ್ರಶಸ್ತಿಗೆ ಮುತ್ತಿಕ್ಕುವ ಕನಸಿನಲ್ಲಿತ್ತು. ಈ ಕನಸನ್ನು ಡೆಲ್ಲಿ ನನಸು ಮಾಡಿಕೊಂಡಿತು. ಇದನ್ನೂ ಓದಿ: ಮಾರ್ಚ್ 26ಕ್ಕೆ ಐಪಿಎಲ್ ಆರಂಭ ಮೇ 29ಕ್ಕೆ ಫೈನಲ್ – 2 ನಗರಗಳಲ್ಲಿ 70 ಪಂದ್ಯ

ಡೆಲ್ಲಿ ಪರ ವಿಜಯ್ ಮಲಿಕ್ 8 ರೈಡ್, 1 ಟೇಕಲ್, 5 ಬೋನಸ್ ಸಹಿತ 14 ಅಂಕ ಮತ್ತು ನವೀನ್ ಕುಮಾರ್ 11 ರೈಡ್, 2 ಬೋನಸ್ ಅಂಕ ಸಹಿತ ಒಟ್ಟು 13 ಪಾಯಿಂಟ್ ಕಲೆಹಾಕಿ ಗೆಲುವಿನ ರೂವಾರಿಯಾದರು. ಇತ್ತ ಪಾಟ್ನಾ ಪರ ಸಚಿನ್ 7 ರೈಡ್, 1 ಟೇಕಲ್, 2 ಬೋನಸ್ ಸಹಿತ ಸೂಪರ್ 10 ಪೂರೈಸಿ ಮಿಂಚಿದರೂ ಆ ಹೋರಾಟ ವ್ಯರ್ಥವಾಯಿತು. ಇದನ್ನೂ ಓದಿ: ಕ್ರಿಕೆಟ್ ದಂತಕಥೆಗಳೊಂದಿಗೆ ಬಾಲಿವುಡ್ ತಾರೆಗಳ ಕ್ರಿಕೆಟ್ ಪಂದ್ಯ
And we have our first time C.H.A.M.P.I.O.N.S. of #VIVOProKabaddi 🏆
𝐃𝐚𝐛𝐚𝐧𝐠 𝐃𝐞𝐥𝐡𝐢 𝐊𝐚𝐛𝐚𝐝𝐝𝐢 𝐂𝐥𝐮𝐛 – 𝐑𝐞𝐦𝐞𝐦𝐛𝐞𝐫 𝐭𝐡𝐞 𝐧𝐚𝐦𝐞! 💥#PATvDEL #SuperhitPanga #VIVOProKabaddi @DabangDelhiKC @PatnaPirates pic.twitter.com/H9C3sd96Te
— ProKabaddi (@ProKabaddi) February 25, 2022
ಪಾಟ್ನಾ ಪೈರೇಟ್ಸ್ 29 ರೈಡ್, 4 ಟೇಕಲ್, 2 ಆಲೌಟ್ ಮತ್ತು 1 ಇತರೆ ಅಂಕ ಸಹಿತ ಒಟ್ಟು 36 ಅಂಕ ಕಲೆಹಾಕಿತು. ಡೆಲ್ಲಿ 27 ರೈಡ್, 2 ಸೂಪರ್ ರೈಡ್, 4 ಟೇಕಲ್, 2 ಆಲೌಟ್ ಮತ್ತು 4 ಇತರೆ ಅಂಕ ಸಹಿತ 37 ಅಂಕ ಸಂಪಾದಿಸಿ 1 ಅಂಕದ ಜಯ ದಾಖಲಿಸಿ ಪ್ರೊ ಕಬಡ್ಡಿ 8 ಆವೃತ್ತಿಯ ಪ್ರಶಸ್ತಿಗೆ ಮುತ್ತಿಕ್ಕಿತು.

Leave a Reply