ಯೋಗಿ ಸರ್ಕಾರದಿಂದ 16.5 ಲಕ್ಷ ಯುವಕರು ಉದ್ಯೋಗದಿಂದ ವಂಚಿತ: ಪ್ರಿಯಾಂಕಾ ಗಾಂಧಿ

ನವದೆಹಲಿ: ಉತ್ತರ ಪ್ರದೇಶದಲ್ಲಿ ಉದ್ಯೋಗ ಹಾಗೂ ಶಿಕ್ಷಣದ ಸಮಸ್ಯೆಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ 16.5 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಹಾಗೂ ನಾಲ್ಕು ಕೋಟಿ ಜನರು ಉದ್ಯೋಗದ ಭರವಸೆಯನ್ನು ಕಳೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಉತ್ತರಪ್ರದೇಶದಲ್ಲಿ ಯಾರು ಮಾತನಾಡುವುದಿಲ್ಲ. ಏಕೆಂದರೆ ಈ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಯೋಗಿ ಸರ್ಕಾರವು ಈ 5 ವರ್ಷದಲ್ಲಿ ಬಜೆಟ್‍ನಲ್ಲಿ ಶಿಕ್ಷಣಕ್ಕೆ ಅಧಿಕ ಒತ್ತನ್ನು ನೀಡಿಲ್ಲ. ಬಜೆಟ್ ಹೆಚ್ಚು ಇದ್ದರೆ, ಯುವಕರು ಉನ್ನತ ವಿಶ್ವವಿದ್ಯಾಲಯಗಳು, ಇಂಟರ್ ನೆಟ್, ವಿದ್ಯಾರ್ಥಿ ವೇತನಗಳು, ಗ್ರಂಥಾಲಯಗಳು ಮತ್ತು ಹಾಸ್ಟೆಲ್‍ಗಳನ್ನು ಬಳಸಿಕೊಳ್ಳಬಹುದಾಗಿತ್ತು. ಈ ರೀತಿ ವಂಚನೆ ಮಾಡಿದ ಸರ್ಕಾರಕ್ಕೆ ನಿಮ್ಮ ಮತದ ಮೂಲಕ ಉತ್ತರ ಕೊಡಬಹುದು ಎಂದು ಯುವಕರಲ್ಲಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

ಪಂಚರಾಜ್ಯಗಳ ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ಪ್ರಾರಂಭಿಸಿದೆ. ಉತ್ತರ ಪ್ರದೇಶದಲ್ಲಿ ಫೆ.10 ರಿಂದ ಮಾ.7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾ. 10ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ – 17ರ ಹುಡುಗ ಅರೆಸ್ಟ್

Comments

Leave a Reply

Your email address will not be published. Required fields are marked *