ಹೊಸ ವರುಷಕ್ಕೆ ಶುಭಕೋರಿ ಟ್ರೋಲ್ ಆದ್ರು ಪ್ರಿಯಾಂಕ ಗಾಂಧಿ!

ನವದೆಹಲಿ: ಪ್ರಿಯಾಂಕ ಗಾಂಧಿ ಅವರು ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಸಮಿತಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಬಯಸಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಆದರೆ ಇಂದು ಕಾಶ್ಮೀರಿ ಪಂಡಿತರಿಗೆ ಯುಗಾದಿಯ ಶುಭಕೋರುವ ಮೂಲಕ ಟ್ರೋಲ್ ಆಗಿದ್ದಾರೆ.

ಪ್ರಿಯಾಂಕ ಗಾಂಧಿ ಅವರು ಕಾಶ್ಮೀರಿ ಪಂಡಿತರಿಗೆ ‘ನವರೇಹ್ ಮುಬಾರಕ್’ ಎಂದು ಶುಭಕೋರುವ ಬದಲು ‘ನೌರುಜ್ ಮುಬಾರಕ್’ ಎಂದು ತಿಳಿಸಿದ್ದರು. ಪ್ರಿಯಾಂಕ ಅವರ ಟ್ವಿಟ್ ಪ್ರತಿಕ್ರಿಯೆ ನೀಡಿರುವ ತರೆಕ್ ಫತಾಹ್ ಅವರು, ನೌರುಜ್ ಹಬ್ಬ ಅನ್ನು ಕಳೆದ ತಿಂಗಳೇ ಆಚರಣೆ ಮಾಡಿದ್ದು, ಕಾಶ್ಮೀರಿ ಪಂಡಿತರ ಹೊಸ ವರ್ಷವನ್ನು ನವರೇಹ್ ಮುಬಾರಕ್ ಎಂದು ಕರೆಯುತ್ತಾರೆ ಎಂದು ತಿಳಿಸಿದ್ದಾರೆ.

ಮಾರ್ಚ್ 21 ರಂದು ಪರ್ಷಿಯನ್ ನೌರುಜ್ ಆಚರಣೆ ಮಾಡಲಾಗುತ್ತದೆ. ಆದರೆ ಸಂಸ್ಕøತ ಭಾಷೆಯಿಂದ ಬಂದಿರುವ ‘ನವ ವರ್ಷ’ ಪದವನ್ನು ನವರೇಹ್ ಎಂದು ಕರೆಯುತ್ತಾರೆ. ಅದನ್ನು ಏಪ್ರಿಲ್ 05 ರಂದು ಆಚರಿಸುತ್ತೇವೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಪ್ರಿಯಾಂಕ ಅವರು ಟ್ವೀಟ್ಟರ್ ಖಾತೆ ತೆರೆದಿದ್ದರು ಕೂಡ ಅಲ್ಪ ಸಮಯದಲ್ಲೇ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇತ್ತ ಪ್ರಿಯಾಂಕ ಅಭಿಮಾನಿಗಳು ಕೂಡ ತಮ್ಮದೇ ವಾದವನ್ನು ಮುಂದಿಟ್ಟು ಅವರ ಟ್ವೀಟನ್ನು ಸಮರ್ಥಿಸಿಕೊಂಡಿದ್ದಾರೆ.

https://twitter.com/bhaiyyajispeaks/status/1114408918787207169

https://twitter.com/vishesh_koul/status/1114408018559492096?

Comments

Leave a Reply

Your email address will not be published. Required fields are marked *