ಇಡಿ ವಿಚಾರಣೆಗೆ ಹಾಜರಾದ ಪತಿಗೆ ಡ್ರಾಪ್ ಕೊಟ್ಟ ಪ್ರಿಯಾಂಕ ಗಾಂಧಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ, ಐಸಿಸಿ ರಾಹುಲ್ ಗಾಂಧಿ ಸಹೋದರಿಯ ಪತಿ ರಾಬರ್ಟ್ ವಾದ್ರಾ ಜಾರಿನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮುಂದೇ ಹಾಜರಾಗಿದ್ದಾರೆ.

ಸ್ವತಃ ಪತ್ನಿ ಪ್ರಿಯಾಂಕ ಗಾಂಧಿ ಅವರು ರಾಬರ್ಟ್ ವಾದ್ರಾರನ್ನು ಇಡಿ ಕಚೇರಿ ಬಳಿ ಡ್ರಾಪ್ ಮಾಡಿದ್ದಾರೆ. ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಆಯ್ಕೆ ಆಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಪತಿಯ ಪ್ರಕರಣದ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ, ನನ್ನ ಪತಿಯ ಪರ ನಾನು ನಿಲ್ಲುವುದಾಗಿ ತಿಳಿಸಿದ್ದರು.

ರಾಬರ್ಟ್ ವಾದ್ರಾ ಕಳೆದ ವಾರವಷ್ಟೇ ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಇಡಿ ವಿಚಾರಣೆಗೆ ಸಹಕಾರ ಕೊಡುವುದಾಗಿ ತಿಳಿಸಿದ್ದರು. ಇದರಂತೆ ನ್ಯಾಯಾಲಯ ಫೆ.16 ರವರೆಗೂ ಬಂಧನದಿಂದ ವಿನಾಯಿತಿ ನೀಡಿ ಇಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲು ವಾದ್ರಾ ಅವರಿಗೆ ಸೂಚನೆ ನೀಡಿತ್ತು. ಇದರಂತೆ ಇಂದು ವಾದ್ರಾ ವಿಚಾರಣೆಗೆ ಹಾಜರಾಗಿದ್ದರು. ದೆಹಲಿಯ ಇಡಿ ಕಚೇರಿಯಲ್ಲಿ ವಾದ್ರಾ ವಿಚಾರಣೆ ನಡೆಯುತ್ತಿದ್ದು, ಮೂಲಗಳ ಪ್ರಕಾರ ವಾದ್ರಾರನ್ನು 7 ಜನ ಇಡಿ ಅಧಿಕಾರಿಗಳ ತಂಡ ವಿಚಾರಣೆ ನಡೆಸಿದೆ ಎಂಬ ಮಾಹಿತಿ ಲಭಿಸಿದೆ. ಇದೇ ಮೊದಲ ಬಾರಿಗೆ ವಾದ್ರಾ ವಿಚಾರಣೆಗೆ ಹಾಜರಾಗಿದ್ದಾರೆ.

ವಾದ್ರಾ ಅವರು ಲಂಡನ್ ನಲ್ಲಿ ಹೊಂದಿರುವ ಆಸ್ತಿಗಳ ಬಗ್ಗೆ ತನಿಖೆ ನಡೆದಿದ್ದು, ಇದರಲ್ಲಿ 3 ವಿಲ್ಲಾ ಹಾಗೂ 2 ಐಶಾರಾಮಿ ಫ್ಲ್ಯಾಟ್‍ಗಳು ಸೇರಿದೆ. ಇವುಗಳನ್ನು 2005 ರಿಂದ 2010ರ ಅವಧಿಯಲ್ಲಿ ಖರೀದಿ ಮಾಡಿದ್ದು, 9 ಮಿಲಿಯನ್ ಪೌಂಡ್ (ಸುಮಾರು 83 ಕೋಟಿ ರೂ.) ಮೌಲ್ಯದ ಎರಡು ಮನೆಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *