ಮಂಗಳಸೂತ್ರ ಧರಿಸಿದಾಗ ಆದ ಅನುಭವ ಹಂಚಿಕೊಂಡ ಪ್ರಿಯಾಂಕಾ

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮಂಗಳಸೂತ್ರ ಧರಿಸಿದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಒಬ್ಬ ಅದ್ಭುತ ನಟಿ ಮಾತ್ರವಲ್ಲದೇ ಫ್ಯಾಶನ್‌ಗೆ ಬಹಳಷ್ಟು ಒತ್ತು ಕೊಡುವ ಮಾಡರ್ನ್ ಮಹಿಳೆಯೂ ಹೌದು. ನಟಿ 2018ರಲ್ಲಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾಗಿದ್ದು, ಇವರಿಬ್ಬರ ಪ್ರೇಮಮಯ ಜೀವನಕ್ಕೆ ಮೂಕವಿಸ್ಮಿತರಾದವರೇ ಇಲ್ಲ.

ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಒಂದು ಬ್ರಾಂಡ್ ಶೂಟ್‌ನಲ್ಲಿ ತಮ್ಮ ಮದುವೆಯ ಸಂದರ್ಭದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅವರು ಮೊದಲ ಬಾರಿಗೆ ಮಂಗಳ ಸೂತ್ರವನ್ನು ಧರಿಸಿದಾಗ ಏನನ್ನಿಸಿತು ಎಂಬುವುದರ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಕನಸು: ಪ್ರಿಯಾಂಕಾ ಚೋಪ್ರಾ

ನಾನು ಮಂಗಳಸೂತ್ರವನ್ನು ಮೊದಲ ಬಾರಿಗೆ ಧರಿಸಿದ ಸಂದರ್ಭ ನನಗಿನ್ನೂ ನೆನಪಿದೆ. ಏಕೆಂದರೆ ಮಂಗಳಸೂತ್ರದ ಅರ್ಥ ಏನು ಎಂಬುದರ ಬಗ್ಗೆ ಕಲ್ಪನೆ ಮಾಡಿಕೊಂಡೇ ಬೆಳೆದಿದ್ದೇನೆ. ಆ ಕ್ಷಣ ನನಗೆ ಬಹಳ ವಿಶೇಷವಾಗಿತ್ತು. ಅದೇ ಸಂದರ್ಭದಲ್ಲಿ ನಾನೊಬ್ಬ ಆಧುನಿಕ ಮಹಿಳೆಯಾಗಿ ಇದರ ಅರ್ಥದ ಪರಿಣಾಮ ಏನು ಎಂಬುದರ ಬಗ್ಗೆ ನನಗೂ ಅರಿವಿತ್ತು ಎಂದರು.

ನಾನು ಮಂಗಳಸೂತ್ರ ಧರಿಸಲು ಇಷ್ಟಪಡುತ್ತೇನೋ ಅಥವಾ ಪಿತೃಪ್ರಧಾನಕ್ಕೆ ಒಳಗಾಗುತ್ತೇನೋ? ಆದರೆ ಅದೇ ಸಂದರ್ಭದಲ್ಲಿ ನನಗನ್ನಿಸಿದ್ದು ನಾನು ಇವೆರಡೂ ತಲೆಮಾರಿನ ಮಧ್ಯದಲ್ಲಿರುತ್ತೇನೆ ಎಂದು. ಸಂಪ್ರದಾಯವನ್ನು ಕಾಪಾಡಿಕೊಳ್ಳಬೇಕು. ಆದರೆ ನೀವು ಯಾರು ಹಾಗೂ ಯಾವ ಕಾರಣಕ್ಕೆ ಇಲ್ಲಿ ನಿಂತಿರುವಿರಿ ಎಂಬುದನ್ನೂ ತಿಳಿದುಕೊಳ್ಳಬೇಕು. ಮುಂದಿನ ಪೀಳಿಗೆಯ ಹುಡುಗಿಯರು ಭಿನ್ನವಾಗುವುದನ್ನು ನಾವು ನೋಡುತ್ತೇವೆ ಎಂದು ಪ್ರಿಯಾಂಕಾ ಹೇಳಿದರು. ಇದನ್ನೂ ಓದಿ: ಮಾಲ್ಡೀವ್ಸ್ ಕಡಲ ತೀರದಲ್ಲಿ ಕಿಯಾರಾ ಅಡ್ವಾನಿ ಹಾಟ್ ಅವತಾರ

ನಂತರದಲ್ಲಿ ಪ್ರಿಯಾಂಕಾ ಮಂಗಳಸೂತ್ರದ ಕಪ್ಪು ಮಣಿಗಳ ಪ್ರಾಮುಖ್ಯತೆಯ ಬಗ್ಗೆಯೂ ತಿಳಿಸಿದ್ದಾರೆ. ಕಪ್ಪು ಎನ್ನುವುದು ದುಷ್ಟತನವನ್ನು ತೊಡೆದು ಹಾಕುತ್ತದೆ ಹಾಗೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.

Comments

Leave a Reply

Your email address will not be published. Required fields are marked *