ನಟಿ ಭಾವನಾ ಮೆನನ್ ಮದುವೆಗೆ ಸ್ಪೆಷಲ್ ವಿಶ್ ಕೋರಿದ ನಟಿ ಪ್ರಿಯಾಂಕಾ ಚೋಪ್ರಾ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಭಾವನಾ ಮೆನನ್ ಇಂದು ತಮ್ಮ ಬಹುದಿನದ ಗೆಳೆಯ ನವೀನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಭಾವನಾ ಹಾಗೂ ನವೀನ್ ದಾಂಪತ್ಯ ಜೀವನಕ್ಕೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಡಿಯೋ ಮೂಲಕ ಅವರಿಗೆ ಶುಭಾಶಯವನ್ನು ಕೋರಿದ್ದಾರೆ.

ನಾನು ನಿಮ್ಮ ದಾಂಪತ್ಯ ಜೀವನಕ್ಕೆ ಶುಭಾಶಯ ಕೋರುತ್ತೇನೆ. ನಿಮ್ಮ ಜೀವನದ ಪಯಣದಲ್ಲಿ ಇದೊಂದು ದೊಡ್ಡ ನಿರ್ಧಾರ. ನಾನು ನಿಮಗೆ ಗುಡ್ ಲಕ್ ತಿಳಿಸುತ್ತೇನೆ. ನೀವು ಅತ್ಯಂತ ಉತ್ಸಾಹಭರಿತ, ಕೆಚ್ಚೆದೆಯ ಮತ್ತು ಅದ್ಭುತ ಮಹಿಳೆ. ನನಗೆ ನೀವು ಎಂದರೆ ಅಚ್ಚುಮೆಚ್ಚು. ನಾನು ಯಾವಾಗಲ್ಲೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ವಿಡಿಯೋದಲ್ಲಿ ಪ್ರಿಯಾಂಕಾ ಶುಭಾಶಯ ಕೋರಿದ್ದಾರೆ.

ಕೇರಳದ ತ್ರಿಶೂರ್‍ನ ಜವರ್‍ಲಾಲ್ ಕನ್ವೇಷನ್ ಹಾಲ್‍ನಲ್ಲಿ ಮದುವೆ ಸಮಾರಂಭ ನಡೆದಿದೆ. ಭಾನುವಾರ ರಾತ್ರಿ ಮಹೆಂದಿ ಕಾರ್ಯಕ್ರಮ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋಗಳು ಹರಿದಾಡುತ್ತಿವೆ.

2017 ಮಾರ್ಚ್ 9ರಂದು ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜುವಾರಿಯರ್ ಹಾಗೂ ಸಂಯುಕ್ತವರ್ಮಾ ಪಾಲ್ಗೊಂಡಿದ್ದರು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ’ ಹಾಗೂ `ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.

 

Comments

Leave a Reply

Your email address will not be published. Required fields are marked *