‘ಜೈ ಹಿಂದ್’ ಎಂದ ಪ್ರಿಯಾಂಕ ಚೋಪ್ರಾ ವಿರುದ್ಧ ಪಾಕ್ ಗರಂ

– ಆನ್‍ಲೈನ್ ಪಿಟಿಷನ್ ಸಲ್ಲಿಸಿದ ಪಾಕಿಸ್ತಾನ

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತದ ಏರ್ ಫೋರ್ಸ್ ಪಾಕ್ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ವೇಳೆ ಬಾಲಿವುಡ್‍ನ ಹಲವು ತಾರೆಯರು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಂತೆ ನಟಿ ಪ್ರಿಯಾಂಕ ಚೋಪ್ರಾ ಕೂಡ ಟ್ವೀಟ್ ಮಾಡಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಸದ್ಯ ಪ್ರಿಯಾಂಕ ಅವರ ಈ ಟ್ವೀಟ್ ಬಗ್ಗೆ ಪಾಕಿಸ್ತಾನ ನೆಟ್ಟಿಗರು ಗರಂ ಆಗಿದ್ದು, ಭಾರತಕ್ಕೆ ಬೆಂಬಲ ನೀಡಿ ಪ್ರಿಯಾಂಕ ಚೋಪ್ರಾ ಟ್ವೀಟ್ ಮಾಡಿದ ಪರಿಣಾಮ ಅಸಮಾಧಾನ ವ್ಯಕ್ತಪಡಿಸಿ ಆನ್‍ಲೈನ್ ಮೂಲಕ ಅಭಿಯಾನವನ್ನು ಆರಂಭಿಸಿದ್ದಾರೆ.

ಪ್ರಿಯಾಂಕ ಅವರ ವಿರುದ್ಧ ಪಾಕ್ ದೂರು ಸಲ್ಲಿಸಲು ಕಾರಣವೂ ಇದ್ದು, ಸದ್ಯ ಪ್ರಿಯಾಂಕ ಯೂನಿಸೆಫ್‍ನ ಸೌಯರ್ದಯುತ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಣಾಮ 2 ದೇಶಗಳ ನಡುವಿನ ಈ ವಿಚಾರದಲ್ಲಿ ಪ್ರಿಯಾಂಕ ಅಂತರ ಕಾಯ್ದುಕೊಳ್ಳಬೇಕಿತ್ತು. ಅಲ್ಲದೇ ಶಾಂತಿ ಕಾಪಾಡಲು ಪ್ರಯತ್ನಿಸಬೇಕಿತ್ತು ಎಂಬುವುದು ಪಾಕಿಸ್ತಾನಿಗರ ಮೊಂಡು
ವಾದವಾಗಿದೆ.

ಭಾರತ ಏರ್ ಸ್ಟ್ರೈಕ್ ನಡೆಸಿದ ಬೆನ್ನಲ್ಲೆ ಪ್ರಿಯಾಂಕ ಅವರು ಕೂಡ ಟ್ವೀಟ್ ಮಾಡಿದ್ದರು. ಆದ್ದರಿಂದ ಅವರನ್ನು ರಾಯಭಾರಿ ಸ್ಥಾನದಿಂದ ಕೆಳಗಿಳಿಸಬೇಕು ಎಂಬುವುದು ಪಾಕ್  ವಾದವಾಗಿದೆ. ಈ ಆನ್ ಲೈನ್ ಅರ್ಜಿಗೆ ಸಾವಿರಾರರು ಮಂದಿ ಸಹಿ ಕೂಡ ಮಾಡಿದ್ದಾರೆ. ಪ್ರಮುಖವಾಗಿ ಯೂನಿಸಿಫ್ ಹ್ಯಾಶ್ ಟ್ಯಾಗ್ ಬಳಿಸಿ ಟ್ರೆಂಡ್ ಮಾಡುತ್ತಿದ್ದಾರೆ. ಆದರೆ ಪಾಕ್ ನೆಟ್ಟಿಗರ ಈ ಆನ್ ಲೈನ್ ಪಿಟಿಷನನ್ನು ಹೇಗೆ ಸ್ವೀಕಾರ ಮಾಡುತ್ತದೆ ಎಂಬುವುದನ್ನು ಕಾದುನೋಡ ಬೇಕಿದೆ.

ಅಂದಹಾಗೇ ಪ್ರಿಯಾಂಕ ಚೋಪ್ರಾ ಅವರ ಇಬ್ಬರು ಪೋಷಕರು ಕೂಡ ಭಾರತ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದವರು. ಈ ಹಿಂದೆಯೂ ಕೂಡ ಪ್ರಿಯಾಂಕರ ಹಿಂದಿಯವರು ಎಂದು ಗೂಗಲ್ ಮಾಡಿ ಪ್ರಶ್ನಿಸಿದ್ದ ಮಂದಿಗೆ ತಿರುಗೇಟು ನೀಡಿದ್ದ ಅವರು, ಹಿಂದಿ ಎಂದರೆ ಭಾಷೆ ಅಷ್ಟೇ, ನಾನು ಹಿಂದೂ, ಅದು ಧರ್ಮ ಎಂದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *