ತನಗಿದ್ದ ರೋಗದ ಬಗ್ಗೆ ಪ್ರಿಯಾಂಕ ಪತಿ ಭಾವನಾತ್ಮಕ ಪೋಸ್ಟ್

ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಸ್ 14 ವರ್ಷಗಳ ಹಿಂದೆ ತಮ್ಮನ್ನು ಕಾಡಿದ್ದ ರೋಗದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರಿಯಾಂಕ, ನನ್ನ ಪತಿ ಅಸ್ತಮಾದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಇದೀಗ ನಿಕ್ ಜೋನಸ್ ಚಿಕ್ಕ ವಯಸ್ಸಿನಲ್ಲಿಯೇ ಟೈಪ್-1 ಡಯಾಬಿಟಿಸ್ ನಿಂದ ಬಳಲುತ್ತಿದ್ದ ವಿಷಯವನ್ನು ಹಂಚಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿಕೊಂಡಿದ್ದಾರೆ.

ನಿಕ್ ಪೋಸ್ಟ್:
14 ವರ್ಷಗಳ ಹಿಂದೆ ಇದೇ ದಿನದಂದು ನನಗೆ ಡಯಾಬಿಟಿಸ್ ಇರೋದು ಗೊತ್ತಾಯ್ತು. ಹೀಗಾಗಿ ಚಿಕ್ಕ ವಯಸ್ಸಿನಿಂದಲೇ ನನ್ನ ಆರೋಗ್ಯದ ಬಗ್ಗೆ ಗಮನ ಕೊಡುತ್ತಿದ್ದೇನೆ. ಧ್ಯಾನ, ವರ್ಕೌಟ್, ಪೌಷ್ಠಿಕಾಂಶ ಆಹಾರ ಸೇವೆನ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ. ಬ್ಲಡ್ ಶುಗರ್ ಮತ್ತು ಇನ್ಸುಲಿನ್ ತೆಗೆದುಕೊಳ್ಳವುದರ ಬಗ್ಗೆ ಜಾಗೃತನಾಗಿರಬೇಕಾಗುತ್ತಿತ್ತು. ಈ ರೋಗ ಬಾಹ್ಯವಾಗಿ ಕಾಣದಿದ್ದರೂ ಆಂತರಿಕವಾಗಿ ನನ್ನನ್ನು ಕುಗ್ಗಿಸಿತ್ತು. ಡಯಾಬಿಟಿಸ್ ನನಗೆ ಒಂಟಿತನದ ಅನುಭವವನ್ನು ನೀಡಿತ್ತು.

ಈ ಕಾರಣದಿಂದಲೇ 2015ರಲ್ಲಿ @BeyondType1 ಆರಂಭಿಸಿದೆ. ಈ ಮೂಲಕ ಡಯಾಬಿಟಿಸ್ ನಿಂದ ಬಳಲುವರಿಗೆ ಜೊತೆಯಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ನವೆಂಬರ್ ಡಯಾಬಿಟಿಸ್ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತದೆ. ಹಾಗಾಗಿ ನಮ್ಮೊಂದಿಗೆ ಸೇರಿ ನಿಮ್ಮ ನೋವುಗಳನ್ನು ಹಂಚಿಕೊಳ್ಳಿ. ಯಾವುದೇ ರೋಗವು ನಿಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಲಾರದು.

https://www.instagram.com/p/B4VZ-SLDpTB/

ಗಾಯಕರಾಗಿರುವ ನಿಕ್ ಜೋನಸ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರು ತಮಗಿಂತ ಹಿರಿಯ ವಯಸ್ಸಿನ ಪ್ರಿಯಾಂಕರನ್ನ ಮದುವೆ ಆಗುವ ಮೂಲಕ ಸುದ್ದಿಯಾಗಿದ್ದರು.

Comments

Leave a Reply

Your email address will not be published. Required fields are marked *