ಪ್ರಿಯಾಂಕ ಚೋಪ್ರಾ ಮೇಣದ ಪ್ರತಿಮೆ ಲಂಡನ್‍ನಲ್ಲಿ ಅನಾವರಣ

ಲಂಡನ್: ನಾಲ್ಕು ಖಂಡಗಳಾದ್ಯಂತ ಜಾಗತೀಕ ಮಟ್ಟದಲ್ಲಿ ಪ್ರಸಿದ್ಧಿಯಾಗಿರುವ ಸೂಪರ್ ಸ್ಟಾರ್ ಗಳ ಪ್ರತಿಮೆಗಳನ್ನು ಅನಾವರಣಗೊಳಸಿರುವ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಇದೀಗ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜೊನಸ್ ಪ್ರತಿಮೆಯನ್ನು ಮಂಗಳವಾರ ಅನಾವರಣಗೊಳಿಸಿದೆ.

ಬಾಲಿವುಡ್ ನಟಿ ಪ್ರಿಯಾಂಕ ಇನ್ನೂ 50 ಬಾಲಿವುಡ್ ಚಿತ್ರಗಳಲ್ಲಿ ನಟಿಸಿಲ್ಲವಾದರೂ ಪಾಶ್ಚಿಮಾತ್ಯ ದೇಶಗಳಲ್ಲಿ ಛಾಪು ಮೂಡಿಸಿ, ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಪ್ರಿಯಾಂಕ ಸದ್ಯಕ್ಕೆ ಮೇಡಮ್ ಟುಸ್ಸಾಡ್ಸ್ ನ ಫೋರ್-ಫಿಗರ್ ಪ್ರಾಜೆಕ್ಟ್ ನಲ್ಲಿ ತೊಡಗಿದ್ದಾರೆ. ಪ್ರಿಯಾಂಕ ದತ್ತು ಪಡೆದ ಊರು ನ್ಯೂಯಾರ್ಕ್ ನಲ್ಲಿ ಅಭಿಮಾನಿಗಳು ಭಾರತದ ದೇಸಿ ಗರ್ಲ್ ಆಗಮನಕ್ಕಾಗಿ ಕಾದುಕುಳಿತಿದ್ದಾರೆ.

2017ರಲ್ಲಿ ಗೋಲ್ಡನ್ ಗ್ಲೋಬ್ಸ್ ನಲ್ಲಿ ಪ್ರಿಯಾಂಕ ಕಾಣಿಸಿಕೊಂಡ ನೋಟಕ್ಕೆ ಸರಿಹೊಂದುವಂತೆ ಪ್ರತಿಮೆಯನ್ನು ವಿಶೇಷವಾಗಿ ನಿರ್ಮಿಸಲಾಗಿದ್ದು, ರಾಲ್ಫ್ ಲಾರೆನ್ ವಿನ್ಯಾಸದ ಸೊಗಸಾದ ಚಿನ್ನದ ಸಕ್ವಿನ್ ಗೌನ್ ಧರಿಸಿರುವ ಪ್ರತಿಮೆಯು ನಟಿಯಂತೆಯೇ ಕಂಗೊಳಿಸುತ್ತಿದೆ. ಪ್ರತಿಮೆಯಲ್ಲಿ ನಟಿಯ ಮದುವೆ ಮತ್ತು ಎಂಗೇಜ್‍ ಮೆಂಟ್‍ನ ವಜ್ರದ ಉಂಗುರವನ್ನು ಸಹ ವಿನ್ಯಾಸಗೊಳಿಸಲಾಗಿದೆ.

ನಾನು ಲಂಡನ್‍ನ್ನು ಇಷ್ಟಪಡುತ್ತೇನೆ. ನನ್ನ ಪ್ರತಿಮೆಯಲ್ಲಿ ಅದೆಂತಹ ಎನರ್ಜಿ ಮತ್ತು ಉತ್ಸಾಹ ಇದೆ. ಮೇಡಮ್ ಟುಸ್ಸಾಡ್ಸ್ ಜೊತೆ ಕೆಲಸ ಮಾಡಲು ಮಜಾ ಎನಿಸುತ್ತದೆ ಎಂದು ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ.

ಇಂಗ್ಲೆಂಡನ್ನು ಹೊರತು ಪಡಿಸಿದರೆ ಮೇಡಮ್ ಟುಸ್ಸಾಡ್ಸ್ ನ ಸೋದರಿ ನಗರಗಳಾದ ನ್ಯೂಯಾರ್ಕ್, ಸಿಡ್ನಿ, ಸಿಂಗಾಪುರ್, ಬ್ಯಾಂಕಾಕ್ ಮತ್ತು ಹಾಂಗ್‍ಕಾಂಗ್‍ಗಳಲ್ಲಿಯೂ ಪ್ರತಿಮೆಯನ್ನು ಕಾಣಬಹುದು.

Comments

Leave a Reply

Your email address will not be published. Required fields are marked *