ಪ್ರತಾಪ್‌ಸಿಂಹಗೆ ತಾಕತ್ತಿದ್ರೆ ವಿಜಯೇಂದ್ರರನ್ನು ಮರಿ ಯಡಿಯೂರಪ್ಪ ಎನ್ನಲಿ: ಪ್ರಿಯಾಂಕ್‌ ಖರ್ಗೆ ಸವಾಲು

priyank kharge

ಬೆಂಗಳೂರು: ಸಂಸದ ಪ್ರತಾಪ್‌ಸಿಂಹ ಅವರಿಗೆ ತಾಕತ್ತಿದ್ದರೆ ವಿಜಯೇಂದ್ರ ಅವರನ್ನು ಮರಿ ಯಡಿಯೂರಪ್ಪ ಎನ್ನಲಿ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಕೆಪಿಸಿಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಯಾರ ಮಾರ್ಗದರ್ಶನದಲ್ಲಿ ಬೆಳೆದಿದ್ದೇನೆ ಅನ್ನೋದು ಎಲ್ಲರಿಗೂ ಗೊತ್ತಿದೆ. ವೈಯಕ್ತಿಕ ಅಟ್ಯಾಕ್ ನಾನು ಯಾವತ್ತೂ ಮಾಡಿಲ್ಲ. ಅಂತಹ ವಾತಾವರಣದಲ್ಲಿ ನಾನು ಬೆಳೆದಿಲ್ಲ. ಆದರೆ ಬಿಟ್ ಕಾಯಿನ್ ವಿವಾದದ ನಂತರ ನನ್ನ ಹಾಗೂ ನನ್ನ ಕುಟುಂಬದ ಮೇಲೆ ವೈಯಕ್ತಿಕ ದಾಳಿ ನಡೆಯುತ್ತಿದೆ. ವಸೂಲಿ ರಾಜ, ಬಿಟ್ ಕಾಯಿನ್ ಕಿಂಗ್ ಅಂತೆಲ್ಲಾ ಬಿರುದು ಕೊಟ್ಟಿದ್ದಾರೆ. ಸದಾಶಿವನಗರದಲ್ಲಿ 50 ಸಾವಿರ ಕೋಟಿ ಆಸ್ತಿ ಇದೆ, ನಗರದಲ್ಲಿ ನಾಲ್ಕು ಬಂಗಲೆ ಇವೆ ಅಂತೆಲ್ಲಾ ಹೇಳಿದ್ದಾರೆ. ಎಲ್ಲರಿಗೂ ಕಾನೂನು ಮೂಲಕ ಲೀಗಲ್ ನೋಟಿಸ್ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಾತನಾಡೋದು ಬೇರೆ, ದಾಖಲೆ ಬಿಡುಗಡೆ ಮಾಡೋದು ಬೇರೆ: ಸಿದ್ದರಾಮಯ್ಯ

ನಿಮ್ಮ ನಾಯಕರೇ ಖುರ್ಚಿಯಲ್ಲಿ ಕುಳಿತಿದ್ದಾರೆ. ಚಿಟಕಿ ಹೊಡೆದರೆ ಐಟಿ, ಇಡಿ ಬರುತ್ತೆ, ತನಿಖೆ ಮಾಡಿಸಿ ನೋಡೋಣ? ರಸ್ತೆಯಲ್ಲಿ ದೋಣಿಗೆ ಹುಟ್ಟು ಹಾಕಿದ ರೇಣುಕಾಚಾರ್ಯರಿಂದ ನಾನು ಕಲಿಯಬೇಕಿಲ್ಲ. ನನಗೆ ಬೈದರೆ ಅವರಿಗೆ ಸಚಿವ ಸ್ಥಾನ ಸಿಗಲ್ಲ. ಎಲ್ಲಿ ಸುತ್ತು ಹಾಕಬೇಕೋ ಅಲ್ಲಿ ಸುತ್ತು ಹಾಕಿ. ಪ್ರತಾಪ್ ಸಿಂಹ ನನಗೆ ಮರಿ ಖರ್ಗೆ ಅಂತಾರೆ. ವಿಜಯೇಂದ್ರಗೆ ಮರಿ ಯಡಿಯೂರಪ್ಪ ಅನ್ನೋ ತಾಕತ್ತಿದೆಯಾ? ಜೈ ಶಾಗೆ ಮರಿ ಶಾ ಅನ್ನೋ ಧೈರ್ಯ ಇದೆಯಾ? ಪ್ರತಾಪ್ ಸಿಂಹನವರಿಗೆ ಪ್ರಶ್ನೆ ಕೇಳಿದರೆ ಉತ್ತರ ಕುಮಾರನಂತೆ ರಣರಂಗ ಬಿಟ್ಟು ಹೋಗ್ತಾರೆ. ಅವರಿಗೂ ಅರ್ಜುನನಂತವರು ಸಿಗಲಿ ಸ್ವಲ್ಪ ಧೈರ್ಯ ಬರಲಿ ಎಂದು ವ್ಯಂಗ್ಯವಾಡಿದ್ದಾರೆ.

ನಾನು ಅರ್ಜಿ ಹಾಕಿ ಹುಟ್ಟಿಲ್ಲ. ನನಗೆ ನಮ್ಮ ತಂದೆ ಬಗ್ಗೆ ಹೆಮ್ಮೆ ಇದೆ. ನಿಮಗೆ ಇದೆಯೋ ಇಲ್ವೋ ಗೊತ್ತಿಲ್ಲ. ನಾನು ಶರಣರ ನಾಡಿಂದ ಬಂದವನು, ಅಂಬೇಡ್ಕರ್ ವಿಚಾರ ಧಾರೆ ನನ್ನಲ್ಲಿದೆ. ನೀವು ಯಾವ ವಿಷಯಕ್ಕೆ ಬಂದರೂ ಉತ್ತರ ಕೊಡಲು ನಾನು ಸಿದ್ಧ. ಪ್ರತಾಪಸಿಂಹನಿಗೆ ಕನ್ನಡವೂ ಸಂಪೂರ್ಣ ಬರಲ್ಲ, ಇಂಗ್ಲಿಷ್ ಸಹ ಸಂಪೂರ್ಣವಾಗಿ ಬರಲ್ಲ. ಪ್ರಿಯಾಂಕ್ ಎಂದರೆ, ಎಲ್ಲರನ್ನೂ ಇಷ್ಟ ಪಡುವವರು ಅಂತ. ಇದು ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಇದೆ. ಸಿಂಹ ಇದನ್ನು ನೋಡಿಕೊಳ್ಳಲಿ. ಪ್ರತಾಪ ಅಂದರೆ ಗಂಭೀರ ಎಂದು ಅರ್ಥ. ನಿನಗೆ ಗಂಭೀರತೆಯೇ ಇಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ‘ಜೈ ಭೀಮ್’ ನಟ ಸೂರ್ಯಗೆ ಜೀವ ಬೆದರಿಕೆ- ನಟನ ಮನೆಗೆ ಪೊಲೀಸ್ ಭದ್ರತೆ

ಮಹಿಳಾ ಆಯೋಗದಲ್ಲಿ ದೂರು ಯಾರ ಮೇಲಿದೆ. ನನ್ನ ಮೇಲಂತೂ ಇಲ್ಲ. ವಿಚಾರ ಇಟ್ಟುಕೊಂಡು ಹೋರಾಟಕ್ಕೆ ಬಂದರೆ ಸರಿ. ನನಗೆ ಬುದ್ಧ, ಬಸವ ತತ್ವ ಸಹ ಗೊತ್ತು. ಅಂಬೇಡ್ಕರ್ ಸಂವಿಧಾನವೂ ನನಗೆ ಗೊತ್ತು. ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ವೈಯಕ್ತಿಕ ದಾಳಿ ಮಾಡಿದರೆ ಕಾನೂನು ಹೋರಾಟಕ್ಕೆ ಸಿದ್ದರಾಗಿರಿ ಎಂದು ಎಚ್ಚರಿಸಿದ್ದಾರೆ.

Comments

Leave a Reply

Your email address will not be published. Required fields are marked *