ನಿಮಗೆ ಮುಂದೆ ಇನ್ನಷ್ಟು ಒಳ್ಳೆಯ ಸಮಯ ಕಾದಿದೆ: ಪ್ರಿಯಾ ಸುದೀಪ್

ಬೆಂಗಳೂರು: ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 23 ವರ್ಷಗಳನ್ನು ಪೂರೈಸಿದ್ದಾರೆ. 23 ವರ್ಷ ಪೂರೈಸಿದಕ್ಕೆ ಅಭಿಮಾನಿಗಳು ಹಾಗೂ ಕನ್ನಡ ಸೇರಿದಂತೆ ಬೇರೆ ಚಿತ್ರರಂಗದ ಕಲಾವಿದರು ಸುದೀಪ್ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಹಾಗೆಯೇ ಸುದೀಪ್ ಅವರ ಪತ್ನಿ ಪ್ರಿಯಾ ಕೂಡ ತಮ್ಮ ಪತಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ಚಿತ್ರರಂಗದಲ್ಲಿ 23 ವರ್ಷ ಪೂರೈಸಿದ್ದೇನೆ ಎಂದು ಒಂದು ಪತ್ರವನ್ನು ಬರೆದು ಟ್ವೀಟ್ ಮಾಡಿದ್ದಾರೆ. “ಜನರನ್ನು ರಂಜಿಸಲು ಅವಕಾಶ ನೀಡಿದ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಚಿತ್ರರಂಗದ ಸದಸ್ಯರಿಗೆ, ಮಾಧ್ಯಮದವರಿಗೆ, ಸ್ನೇಹಿತರಿಗೆ ಹಾಗೂ ನನ್ನ ಕುಟುಂಬದವರಿಗೆ ಧನ್ಯವಾದಗಳು. ನಾನು ಹೀಗೆ ನಿಮ್ಮನ್ನು ರಂಜಿಸುತ್ತೇನೆ. ನೀವು ಕೂಡ ನನ್ನ ಹಾಗೂ ನನ್ನ ಸಿನಿಮಾಗಳನ್ನು ಪ್ರೀತಿಸಿ” ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‍ಗೆ ಸುದೀಪ್ ಅವರ ಪತ್ನಿ ರೀ-ಟ್ವೀಟ್ ಮಾಡಿದ್ದಾರೆ. “ನಿಮಗೆ ಮುಂದೆ ಇನ್ನಷ್ಟು ಒಳ್ಳೆಯ ಸಮಯ ಕಾದಿದೆ. ನಿಮ್ಮ 23 ವರ್ಷಗಳ ಕೆಲಸಕ್ಕೆ ಧನ್ಯವಾದ ತಿಳಿಸುತ್ತೇನೆ” ಎಂದು ಪ್ರಿಯಾ ಅವರು ಸುದೀಪ್ ಅವರ ಟ್ವೀಟ್‍ಗೆ ರೀ-ಟ್ವೀಟ್ ಮಾಡಿದ್ದಾರೆ.

ಪತ್ನಿ ಪ್ರಿಯಾ ಟ್ವೀಟ್‍ಗೆ ಕಿಚ್ಚ ಸುದೀಪ್ ಅವರು “ಹಣ ಮತ್ತು ಪೆಟ್ರೋಲ್ ತುಂಬಿದ ಸ್ಕೂಟಿಗೆ ಧನ್ಯವಾದಗಳು. ಜೀವನ ಎಂದಿಗೂ ಸುಲಭವಾಗಿ ಇರುವುದಿಲ್ಲ. ನಾನು ಎಂದಿನಂತೆ ನಿನ್ನನ್ನು ಪ್ರೀತಿಸುತ್ತೇನೆ ಪಿಯಾ. ನಿನ್ನ ಜೊತೆ ವಿಶ್ರಾಂತಿಯಲ್ಲಿ ಬೈ ಟು ಚಹಾ ಕುಡಿಯುವುದು ಬಾಕಿ ಇದೆ. ನನ್ನ ಡಾರ್ಲಿಂಗ್ ಬೇಬಿ ಸಾನು” ಎಂದು ಬರೆದು ರೀ-ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *