ವಿಕ್ರಾಂತ್ ರೋಣ ಸಿನಿಮಾ ಆಗೋಕೆ ಇವರೇ ಸ್ಪೂರ್ತಿ: ಕಿಚ್ಚ ಹೀಗಂದಿದ್ದು ಯಾರ ಬಗ್ಗೆ?

ಚಂದನವನದಲ್ಲಿ ಸದ್ಯ ಸಖತ್‌ ಹೈಪ್‌ ಸೃಷ್ಠಿಸಿರುವ `ವಿಕ್ರಾಂತ್ ರೋಣ’ ಇದೇ ಜುಲೈ 28ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಪ್ರಚಾರ ಕೂಡ ಭರ್ಜರಿಯಾಗಿ ಮಾಡಲಾಗುತ್ತಿದೆ. ಇದೀಗ ವಿಕ್ರಾಂತ್ ರೋಣ ಚಿತ್ರದ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ನಟ ಸುದೀಪ್ `ವಿಕ್ರಾಂತ್ ರೋಣ’ ಸಿನಿಮಾ ಆಗೋಕೆ ಸ್ಫೂರ್ತಿ ಮತ್ತು ಕಿಚ್ಚನ ಹಿಂದಿನ ಶಕ್ತಿ ಯಾರು ಅಂತಾ ರಿವೀಲ್ ಮಾಡಿದ್ದಾರೆ.

ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ `ವಿಕ್ರಾಂತ್ ರೋಣ’ ಸದ್ಯದಲ್ಲೇ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಕಿಚ್ಚ ಸುದೀಪ್ ಕೂಡ ಸಿನಿಮಾಗಾಗಿ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಸದ್ಯ ಚಿತ್ರದ ಕುರಿತು ಪಬ್ಲಿಕ್ ಟಿವಿಯಲ್ಲಿ ಮಾತನಾಡಿರುವ ಸುದೀಪ್ ಇಂಟರೆಸ್ಟಿಂಗ್ ಸಮಾಚಾರವೊಂದನ್ನು ರಿವೀಲ್ ಮಾಡಿದ್ದಾರೆ. `ವಿಕ್ರಾಂತ್ ರೋಣ’ ಸಿನಿಮಾ ಆಗೋಕೆ ಕಾರಣ ತಮ್ಮ ಪತ್ನಿ ಪ್ರಿಯಾ ಎಂದು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಸಂಜನಾ ಗಲ್ರಾನಿ ಮಗುವಿನ ನಾಮಕರಣ: ಹೆಸರೇನು ಗೊತ್ತಾ?

ನಿರ್ದೇಶಕ ಅನೂಪ್ ಭಂಡಾರಿ ಮೊದಲು ಬೇರೆಯೊಂದು ಕಥೆ ರೆಡಿ ಮಾಡಿಕೊಂಡಿದ್ದರಂತೆ. ಬಳಿಕ ನಿರ್ಮಾಪಕ ಜಾಕ್ ಮಂಜು ಮತ್ತು ಪ್ರಿಯಾ ಸುದೀಪ್ ಅವರ ಬಳಿ ಬೇರೆ ಕಥೆಯ ಬಗ್ಗೆ ಸಹಜವಾಗಿ ಮಾತನಾಡಿದ್ದರು.

ಪ್ರಿಯಾ ಅವರಿಗೆ ಕಥೆ ಇಷ್ಟವಾಗಿ ಈ ಸಿನಿಮಾವನ್ನು ಸುದೀಪ್ ಅವರೇ ಯಾಕೆ ಮಾಡಬಾರದು ಎಂದೆನಿಸಿ, ಪತಿ ಸುದೀಪ್ ಬಳಿ ಹೇಳಿಕೊಂಡಿದ್ದರು. ನಂತರ ಕಿಚ್ಚನಿಗೂ ಕಂಟೆಂಟ್ ಇಷ್ಟವಾಗಿ, ವಿಕ್ರಾಂತ್ ರೋಣ ಚಿತ್ರ ಶುರುವಾಯಿತು. ಸಣ್ಣ ಬಜೆಟ್ ಸಿನಿಮಾ ಮಾಡೋಕೆ ಹೊರಟಿದ್ದ ಚಿತ್ರತಂಡ ದೊಡ್ಡದಾಗಿ ಆಲೋಚನೆ ಮಾಡಿ ಮುಂದೆ ಹೆಜ್ಜೆ ಇಟ್ರು ಅಂತಾ ನಟ ಸುದೀಪ್ ಪತ್ನಿ ತನ್ನ ಹಿಂದಿನ ಶಕ್ತಿ ಅಂತಾ ಹೇಳಿಕೊಂಡಿದ್ದಾರೆ.

ವಿಕ್ರಾಂತ್ ರೋಣನಾಗಿ ಸುದೀಪ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ರಾ ರಾ ರಕ್ಕಮ್ಮ ಆಗಿ ಜಾಕ್ವೆಲಿನ್ ಹೆಜ್ಜೆ ಹಾಕಿದ್ದಾರೆ. ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿದ ಸಿನಿಮಾ ಇದೇ ಜುಲೈ 28ಕ್ಕೆ ಬಹುಭಾಷೆಗಳಲ್ಲಿ ತೆರೆ ಕಾಣಲು ರೆಡಿಯಾಗಿದೆ.

Live Tv

Comments

Leave a Reply

Your email address will not be published. Required fields are marked *