ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರನ್ನು ಹಿಂದಿಕ್ಕಿದ ಪ್ರಿಯಾ ವಾರಿಯರ್

ನವದೆಹಲಿ: ಒಂದು ಹಾಡಿನ ವಿಡಿಯೋ ಮೂಲಕ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿರೋ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ.

ಪ್ರಿಯಾ ಅವರ ಇನ್ ಸ್ಟಾಗ್ರಾಮ್ ಖಾತೆಯನ್ನ ಕೇವಲ ಒಂದೇ ದಿನದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಫಾಲೋ ಮಾಡಿದ್ದರು. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಫಾಲೋ ಆಗಿರುವ ವಿಶ್ವದ ಮೂರನೇ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆಗೆ ಪ್ರಿಯಾ ಪಾತ್ರರಾಗಿದ್ದರು.

ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲೀ ಜೆನ್ನರ್ ಮತ್ತು ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಾಲಿಗೆ 18 ವರ್ಷದ ಪ್ರಿಯಾ ಪ್ರಕಾಶ್ ವಾರಿಯಾರ್ ಸೇರಿದ್ದರು. ಕೇವಲ ಒಂದು ದಿನದಲ್ಲಿ ಅತೀ ಹೆಚ್ಚು ಫಾಲೋವರ್ ಗಳನ್ನ ಪಡೆಯುವ ಮೂಲಕ ಈ ಪ್ರಸಿದ್ಧ ವ್ಯಕ್ತಿಗಳ ಸಾಲಿನಲ್ಲಿ ನಿಂತಿದ್ರು. ಒಂದೇ ದಿನದಲ್ಲಿ ಕೈಲೀ ಜೆನ್ನರ್ ರನ್ನ 8 ಲಕ್ಷ ಹಾಗೂ ರೊನಾಲ್ಡೊ ಅವರನ್ನು 6.50 ಲಕ್ಷ ಮಂದಿ ಫಾಲೋ ಮಾಡಿದ್ದರು.

ಪ್ರಸ್ತುತ ಪ್ರಿಯಾ ವಾರಿಯರ್ 37 ಲಕ್ಷ (3.7 ಮಿಲಿಯನ್) ಇನ್ ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದಿದ್ದು, ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರನ್ನ ಹಿಂದಿಕ್ಕಿದ್ದಾರೆ. ಪ್ರಿಯಾ ಇನ್ ಸ್ಟಾಗ್ರಾಮ್ ಖಾತೆಗೆ `ಬ್ಲೂ ಟಿಕ್ ಮಾರ್ಕ್’ ಕೂಡ ಲಭಿಸಿದೆ. ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಪ್ರಸ್ತುತ 28 ಲಕ್ಷ (2.8 ಮಿಲಿಯನ್) ಇನ್ ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಮಾನುಷಿ ಚಿಲ್ಲರ್ ಅವರಿಗಿಂತ ಪ್ರಿಯಾ ವಾರಿಯರ್ ಸುಮಾರು 9 ಲಕ್ಷ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಮಾನುಷಿ ಚಿಲ್ಲರ್ 2017ರಲ್ಲಿ ಚೀನಾದ ಸನ್ಯ ಸಿಟಿಯಲ್ಲಿ ವಿಶ್ವ ಸುಂದರಿ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. 2000 ಇಸವಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ಅದಾಗಿ 17 ವರ್ಷಗಳ ನಂತರ ಮಾನುಷಿ ಮತ್ತೆ ವಿಶ್ವಸುಂದರಿ ಸ್ಪರ್ಧೆ ಗೆದ್ದು ಭಾರತಕ್ಕೆ ಹಮ್ಮೆ ತಂದಿದ್ದರು. ನವೆಂಬರ್ 18, 2017ರಲ್ಲಿ ವಿಶ್ವಸುಂದರಿ ಸ್ಪರ್ಧೆ ಗೆದ್ದು ಮಾನುಷಿ ಭಾರತದ 6ನೇ ವಿಶ್ವಸುಂದರಿ ಆಗಿದ್ದಾರೆ.

ಇತ್ತ ಕೇವಲ ಒಂದು ದಿನದಲ್ಲಿ `ಒರು ಆಡಾರ್ ಲವ್’ ಚಿತ್ರದ `ಮಾಣಿಕ್ಯಾ ಮಲರಾಯಾ ಪೂವಿ’ ಹಾಡಿನ ಮೂಲಕ ಪ್ರಿಯಾ ವಾರಿಯರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಚಿತ್ರದ ಈ ಹಾಡನ್ನು ವಿನೀತ್ ಶ್ರೀನಿವಾಸನ್ ಅವರು ಹಾಡಿದ್ದು, ಶಾನ್ ರೆಹಮಾನ್ ಗೀತೆ ಸಂಯೋಜನೆ ಮಾಡಿದ್ದಾರೆ.

ಚಿತ್ರತಂಡ 1.32 ಸೆಕೆಂಡ್ ನ ಹಾಡಿನ ವಿಡಿಯೋ ಬಿಡುಗಡೆ ಮಾಡಿದ್ದು, ಪ್ರಿಯಾ ಅವರ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಈ ಹಾಡನ್ನು ತನ್ನ ಹಳೆಯ ಪ್ರೀತಿಯನ್ನು ನೆನಪು ಮಾಡಿಕೊಳ್ಳುವ ಸನ್ನಿವೇಶದಲ್ಲಿ ಮೂಡಿಬಂದಿದೆ. ಹೈಸ್ಕೂಲ್ ನಲ್ಲಿ ಉಂಟಾದ ಮೊದಲ ಲವ್ ಕುರಿತಾಗಿ ಮುಗ್ಧವಾಗಿ ಹಾಡನ್ನು ಚಿತ್ರೀಕರಿಸಲಾಗಿದೆ. ಚಿತ್ರದ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ಕಂಡ ಪ್ರಿಯಾ ಚಿತ್ರದ ನಿರ್ದೇಶಕರು, ಚಿತ್ರ ತಂಡ ಮತ್ತು ಅಭಿಮಾನಿಗಳಿಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದರು. ಇದನ್ನು ಓದಿ: ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದ ಪ್ರಿಯಾ ವಾರಿಯರ್!

https://www.instagram.com/p/Be-0hR9jBqT/?hl=en&taken-by=priya.p.varrier

https://www.instagram.com/p/BfKMOySjhKR/?hl=en&taken-by=priya.p.varrier

Comments

Leave a Reply

Your email address will not be published. Required fields are marked *