ಮುಂಬೈ: ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಕ್ಷರಾ ಹಾಸನ್ ತನ್ನ ಪ್ರೈವೇಟ್ ಫೋಟೋ ಲೀಕ್ ಆಗಿ ವೈರಲ್ ಆಗುತ್ತಿದ್ದಂತೆಯೇ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಅಕ್ಷರಾ ಒಳಪಡುಪಿನಲ್ಲಿರುವ ಫೋಟೋಗಳು ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.

ಅಕ್ಷರಾ ಅವರ ಈ ಫೋಟೋವನ್ನು ಎಡಿಟ್ ಮಾಡಲಾಗಿದ್ದೀಯಾ ಅಥವಾ ಇದು ಸ್ವತಃ ಆಕೆಯ ಫೋಟೋನಾ ಎಂಬುದು ಖಚಿತವಾಗಿಲ್ಲ. ಆದರೆ ಅಕ್ಷರಾ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಶೇರ್ ಆಗುತ್ತಿದೆ.
ಅಕ್ಷರಾ ಹಾಸನ್ 2015ರಲ್ಲಿ ಹಿರಿಯ ನಟ ಅಮಿತಾಬ್ ಬಚ್ಚನ್ ಹಾಗೂ ನಟ ಧನುಷ್ ಜೊತೆ ‘ಶಮಿತಾಬ್’ ಚಿತ್ರದಲ್ಲಿ ನಟಿಸಿದ್ದರು. ಈ ಹಿಂದೆ ‘ದಿ-ವಿಲನ್’ ಸಿನಿಮಾದ ನಟಿ ಆ್ಯಮಿ ಜಾಕ್ಸನ್ ಅವರ ಫೋನ್ ಹ್ಯಾಕ್ ಆಗಿ ಅವರ ಖಾಸಗಿ ಫೋಟೋಗಳು ಲೀಕ್ ಆಗಿ ವೈರಲ್ ಆಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply