ಕಿದ್ವಾಯಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೈದಿ ವಿಜಯಪುರದಲ್ಲಿ ಅರೆಸ್ಟ್

ಬೆಂಗಳೂರು/ವಿಜಯಪುರ: ಚಿಕಿತ್ಸೆಗೆಂದು ಬಂದಿದ್ದ ವೇಳೆ ಕಿದ್ವಾಯಿ ಆಸ್ಪತ್ರೆಯಿಂದ (Kidwai Hospital) ಪರಾರಿಯಾಗಿದ್ದ ಕೈದಿಯನ್ನು ಸಿದ್ದಾಪುರ ಪೊಲೀಸರು (Siddapura Police) ವಿಜಯಪುರದಲ್ಲಿ (Vijayapura) ಬಂಧಿಸಿದ್ದಾರೆ.

ಕೈದಿ ಚೇತನ್ ಕಲ್ಯಾಣಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸಜಾ ಕೈದಿಯನ್ನ ಬಿಜಾಪುರದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಬಾಯಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅಪರಾಧಿಯನ್ನ ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದಿದ್ದ ವೇಳೆ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಹಿಡಿಯಲು ಪ್ರಯತ್ನಿಸಿದರೂ ಸಿಗದೇ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಕಿದ್ವಾಯಿ ಆಸ್ಪತ್ರೆಯಿಂದ ಸಜಾ ಕೈದಿ ಪರಾರಿ – ಕ್ಯಾನ್ಸರ್ ಟ್ರೀಟ್‌ಮೆಂಟ್‌ಗೆ ಬಂದು ಎಸ್ಕೇಪ್

ಕಳೆದ ಆಗಸ್ಟ್ 21ರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಜಾ ಕೈದಿ ಚೇತನ್ ಸೆ.8ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದ.