ಉದ್ಯಮಿಗೆ ಹಣಕ್ಕೆ ಜೈಲಿನಿಂದಲೇ ಬೇಡಿಕೆಯಿಟ್ಟ ಕೈದಿ

ಶಿವಮೊಗ್ಗ: ನಗರದ ಉದ್ಯಮಿ ಒಬ್ಬರಿಗೆ ಪರಪ್ಪನ ಅಗ್ರಹಾರ ಕಾರಾಗೃಹದಿಂದಲೇ ವಾಟ್ಸಾಪ್ ಕಾಲ್ ಮಾಡಿ ಹಣಕ್ಕೆ ಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಹಾಗು ರೌಡಿಶೀಟರ್ ನನ್ನು ಸಿಇಎನ್ ಠಾಣೆ ಪೊಲೀಸರು ವಿಚಾರಣೆಗಾಗಿ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಾಡಿ ವಾರೆಂಟ್ ಮೂಲಕ ಶಿವಮೊಗ್ಗಕ್ಕೆ ಕರೆ ತಂದಿದ್ದಾರೆ.

ಶನಿವಾರ ಶಂಕಿತ ಉಗ್ರ ಸದ್ದಾಂ ಹುಸೇನ್ ಹಾಗು ರೌಡಿಶೀಟರ್ ನಾಗೇಂದ್ರ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನವಂಬರ್ 2ರ ವರೆಗೆ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ಸಿಇಎನ್ ಪೊಲೀಸರ ವಶಕ್ಕೆ ನೀಡಿ ಎಂದು ಆದೇಶಿಸಿದೆ. ಇದನ್ನೂ ಓದಿ: ಪಬ್ಲಿಕ್ ಹೀರೋ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅನಕ್ಷರಸ್ಥ ಪುರಾಣ ಕವಿ ರಾಮಣ್ಣ ಇನ್ನಿಲ್ಲ

ಶಿವಮೊಗ್ಗದ ಉದ್ಯಮಿಗೆ ವಾಟ್ಸಾಪ್ ಕರೆ ಮಾಡಿದ್ದ ಶಂಕಿತ ಉಗ್ರ ಹಣಕ್ಕೆ ಬೆದರಿಕೆ ಹಾಕಿದ್ದ, ಅಲ್ಲದೇ ಬೆದರಿಕೆ ಕರೆಗೆ ಭಯಗೊಂಡ ಉದ್ಯಮಿ ಶಂಕಿತ ಉಗ್ರನ ಪತ್ನಿ ಬ್ಯಾಂಕ್ ಖಾತೆಗೆ 80 ಸಾವಿರ ರೂ. ಹಣವನ್ನು ಜಮಾ ಮಾಡಿದ್ದರು. ಈ ಬಗ್ಗೆ ಅ.14 ರಂದು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ವಶಕ್ಕೆ ಪಡೆದಿರುವ ಸಿಇಎನ್ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆತ್ಮಸಾಕ್ಷಿಗೆ ಅನುಗುಣವಾಗಿ ಸರ್ಕಾರಿ ನೌಕರರು ಸೇವೆ ಸಲ್ಲಿಸಬೇಕು: ಸರಸ್ವತಿ.ಕೆ.ಎನ್

Comments

Leave a Reply

Your email address will not be published. Required fields are marked *