ಒಮ್ಮೆ ಕರ್ತವ್ಯ ಪಥ ನೋಡಿ ಭವಿಷ್ಯದ ಭಾರತ ನಿಮಗೆ ಇಲ್ಲಿ ಕಾಣುತ್ತದೆ: ಮೋದಿ

ನವದೆಹಲಿ: ದೇಶದಲ್ಲಿರುವ ಎಲ್ಲರೂ ಒಮ್ಮೆ ಕರ್ತವ್ಯ ಪಥ ನೋಡಿ. ಭವಿಷ್ಯದ ಭಾರತ ನಿಮಗೆ ಇಲ್ಲಿ ಕಾಣುತ್ತದೆ ಎಂದು ಕರ್ತವ್ಯ ಪಥ (Kartavya Path) ಉದ್ಘಾಟಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi)  ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಗಿದ ನಿನ್ನೆಗಳನ್ನು ಬಿಟ್ಟು, ನಾಳೆಯ ದಿನಗಳಲ್ಲಿ ಬಣ್ಣ ತುಂಬುತ್ತಿದ್ದೇವೆ. ಗುಲಾಮಿಯ ಪ್ರತೀಕವಾಗಿದ್ದ ಕಿಂಗ್ಸ್‌ವೇ ಇತಿಹಾಸ ಸೇರಿದೆ. ಇದು ಕರ್ತವ್ಯ ಪಥ ರೂಪದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhas Chandra Bose) ಅವರ ಮೂರ್ತಿಯನ್ನು ಸ್ಥಾಪಿಸಿದೆ. ಸ್ವಾತಂತ್ರ್ಯಕ್ಕೂ ಮುನ್ನ ಬ್ರಿಟಿಷರ ಮೂರ್ತಿ ಇತ್ತು. ಅದೇ ಸ್ಥಳದಲ್ಲಿ ನೇತಾಜಿ ಮೂರ್ತಿ ಸ್ಥಾಪಿಸಲಾಗಿದೆ. ಇದೊಂದು ಐತಿಹಾಸಿಕ, ಅಭೂತಪೂರ್ವ ಕ್ಷಣ ಎಂದರು. ಇದನ್ನೂ ಓದಿ: ಇಂಡಿಯಾ ಗೇಟ್‌ನಲ್ಲಿ ಸುಭಾಷ್‌ ಚಂದ್ರ ಬೋಸ್ ಪ್ರತಿಮೆ ಅನಾವರಣ; ಕರ್ತವ್ಯ ಪಥ ಉದ್ಘಾಟಿಸಿದ ಪ್ರಧಾನಿ ಮೋದಿ

ಬೋಸ್ ಅವರನ್ನು ಇಡೀ ವಿಶ್ವ ನಾಯಕ ಎಂದು ಒಪ್ಪಿಕೊಂಡಿತ್ತು. ಭಾರತದ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದರು. ಆಧುನಿಕ ಭಾರತ ಕಟ್ಟುವ ಕನಸು ಕಂಡಿದ್ದರು. ಸುಭಾಷ್ ಅಖಂಡ ಭಾರತದ ಮೊದಲ ನಾಯಕ. ಮೊದಲು ಅಂಡಮಾನ್ ಸ್ವಾತಂತ್ರ್ಯ ಗೊಳಿಸಿದ್ದರು. ಅಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದರು. 2019 ರಲ್ಲಿ ಗಣರಾಜ್ಯೋತ್ಸವದ ದಿನ ಅಜಾದ್ ಹಿಂದ್ ಸದಸ್ಯರಿಗೆ ಅವಕಾಶ ನೀಡಲಾಗಿತ್ತು. ಗುಲಾಮಿ ಮಾನಸಿಕತೆಯಿಂದ ಹೊರ ಬರುವುದು. ನಮ್ಮ ಸಂಸ್ಕೃತಿ ಬಗ್ಗೆ ಹೆಮ್ಮೆ ಪಡುವ ಸಂಕಲ್ಪ ಮಾಡುವುದು ಪಂಚ ಪ್ರಾಣ ಸಂಕಲ್ಪ ಭಾಗವಾಗಿದೆ. ಇದು ಈಗಿನಿಂದ ಗುಲಾಮಿತನದಿಂದ ಹೊರ ಬರುವ ಪ್ರಯತ್ನ ಮಾಡಿಲ್ಲ. ಹಿಂದೆ ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ ಮಾರ್ಗ್ ಎಂದು ಬದಲಾಯಿಸಲಾಯಿತು. ಇಲ್ಲಿ ಪ್ರಧಾನಿ ಮಂತ್ರಿಗಳ ನಿವಾಸ ಇದೆ. ಈ ಬದಲಾವಣೆ ಸೀಮಿತವಾಗಿಲ್ಲ. ನೀತಿಯಲ್ಲೂ ಬದಲಾವಣೆ ಶುರುವಾಗಿದೆ. ಸಾಕಷ್ಟು ಬ್ರಿಟಿಷ್ ಕಾನೂನು ಬದಲಾಯಿಸಿದೆ ಎಂದು ನುಡಿದರು.

ಬಜೆಟ್ ಸಮಯ ಬದಲಾಯಿಸಿದೆ. ಎನ್‍ಇಪಿ ಮೂಲಕ ಶಿಕ್ಷಣ ಪದ್ದತಿ ಬದಲಿಸಿದೆ. ಇವುಗಳ ಮೂಲಕ ಗುಮಾಮಿ ಮಾನಸಿಕತೆಯಿಂದ ಹೊರ ಬರುವ ಪ್ರಯತ್ನ ಆರಂಭಿಸಿದೆ. ಕರ್ತವ್ಯ ಪಥ ಬರೀ ಇಟ್ಟಿಗೆ ರಸ್ತೆಯಲ್ಲ. ಇದು ಪ್ರೇರಣೆಯ ರಸ್ತೆಯಾಗಿದೆ. ಬೋಸ್ ಪ್ರತಿಮೆ, ರಾಷ್ಟ್ರೀಯ ಯುದ್ಧ ಸ್ಮಾರಕ ಪ್ರೇರಣೆ ನೀಡಲಿದೆ. ಇದೇ ಪ್ರೇರಣೆಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ರಾಜಪಥ್ ಬ್ರಿಟಿಷ್‍ರಿಗಾಗಿತ್ತು, ಅದು ಗುಲಾಮಿ ಪ್ರತೀಕವಾಗಿತ್ತು. ಈಗ ವಾಸ್ತುಶಿಲ್ಪ ಅದರ ಆತ್ಮವೂ ಬದಲಾಗಿದೆ. ಈ ಹಾದಿಯಲ್ಲಿ ಬರುವ ಜನ ನಾಯಕರಿಗೆ ತಮ್ಮ ಕರ್ತವ್ಯ ನೆನಪಿಸುತ್ತದೆ. ರಾಷ್ಟ್ರವೇ ಮೊದಲು ಎನ್ನುವ ಭಾವನೆ ರಕ್ತ ಕಣ ಕಣದಲ್ಲೂ ಮೂಡುವಂತೆ ಪ್ರೇರಣೆ ನೀಡಲಿದೆ. ಈ ಕಾಮಗಾರಿಯಲ್ಲಿ ಕೆಲಸ ಮಾಡಿದ ಕೆಲಸಗಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಅವರು ದೇಶದ ಅಭಿವೃದ್ಧಿ ಕೆಲಸದಲ್ಲಿ ಭಾಗವಾಗಿದ್ದಾರೆ ಎಂದರು. ಇದನ್ನೂ ಓದಿ: ಮೋದಿ ಹತ್ಯೆ ಸಂಚು ಪ್ರಕರಣದ ಬೆನ್ನತ್ತಿದ NIA

ಜನವರಿ 26 ರಂದು ಅವರು ಮತ್ತು ಅವರ ಕುಟುಂಬ ನನ್ನ ಅತಿಥಿಯಾಗಿರಲಿದ್ದಾರೆ. ಕರ್ತವ್ಯ ಪಥ ಮೇಲೆ ದೇಶದ ದೃಷ್ಟಿ ಇದೆ. ದೇಶದ ಎಲ್ಲ ನಾಗರಿಕರು ಈ ಕಾರ್ಯಕ್ರಮದ ಭಾಗವಾಗಿದ್ದಾರೆ. ನಾನು ಎಲ್ಲರಿಗೂ ಸ್ವಾಗತ ಕೋರುತ್ತೇನೆ. ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿದೆ. ವಿಮಾನ ನಿಲ್ದಾಣಗಳು, ಮೆಟ್ರೊ ವಿಸ್ತರಣೆ ನಡೆಯುತ್ತಿದೆ. ಡಿಜಿಟಲ್ ಸೌಕರ್ಯಗಳ ಜೊತೆಗೆ ಸಾಂಸ್ಕೃತಿಕ ಸೌಕರ್ಯಗಳನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. ಈ ಮೂಲಕ ಭಾರತದ ಸಾಂಸ್ಕೃತಿಕತೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *