ವಿಶ್ವದ ಜನಪ್ರಿಯ ನಾಯಕರಲ್ಲಿ ಮೋದಿ ನಂಬರ್ 1

ನವದೆಹಲಿ: ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಗ್ರಸ್ಥಾನಕ್ಕೆರಿದ್ದಾರೆ.

ಮಾರ್ನಿಂಗ್ ಕನ್ಸಲ್ಟ್ ನಡೆಸಿದ್ದ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಶೇ.75ರ ಅನುಮೋದನೆಯನ್ನು ಪಡೆಯುವ ಮೂಲಕ ಜನಪ್ರಿಯ ನಾಯಕರೆಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿಯ ನಂತರ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹಾಗೂ ಇಟಲಿ ಪ್ರಧಾನಿ ಮಾರಿಯೋ ಧ್ರಾಗಿ ಕ್ರಮವಾಗಿ 63 ಮತ್ತು 54 ರಷ್ಟು ರೇಟಿಂಗ್‍ಗಳೊಂದಿಗೆ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

22 ವಿಶ್ವನಾಯಕರನ್ನೊಳಗೊಂಡಿರುವ ಈ ಪಟ್ಟಿಯಲ್ಲಿ ಅಮೆರಿಕದ ಪ್ರಧಾನಿ ಬೈಡನ್ 41 ರೇಟಿಂಗ್ ಪಡೆಯುವ ಮೂಲಕ 5ಬೇ ಸ್ಥಾನದಲ್ಲಿದ್ದರೆ, ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೊ ಶೇ.39 ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಶೇ.38 ರಷ್ಟು ರೇಟಿಂಗ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣೇಶ ಹಬ್ಬ – ಪೊಲೀಸ್‌ ಇಲಾಖೆಯ ನಿಯಮಗಳೇನು?

ಈ ಮೊದಲು 2022ರ ಜನವರಿ ಹಾಗೂ 2021ರ ನವೆಂಬರ್‌ನಲ್ಲಿ ಸಮೀಕ್ಷೆ ನಡೆಸಿದ್ದಾಗ ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಅಗ್ರಸ್ಥಾನದಲ್ಲಿದ್ದರು. ಇದನ್ನೂ ಓದಿ: ಭಾರತದಲ್ಲೇ ಮೊದಲ ಬಾರಿಗೆ ತಯಾರಾಯ್ತು ಎಕೆ-630ನ ಮದ್ದುಗುಂಡು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *